ನರಸೀಪುರದ ನಾಟಿ ವೈದ್ಯ ನಾರಾಯಣ ಮೂರ್ತಿ ಇನ್ನಿಲ್ಲ..!
- 15 Jan 2024 , 1:13 AM
- Shivamogga
- 145
ಶಿವಮೊಗ್ಗ : ಮಾರಕ ಕ್ಯಾನ್ಸರ್ ರೋಗ ಸೇರಿದಂತೆ ಇನ್ನಿತರ ಹಲವಾರು ಕಾಯಿಲೆಗಳಿಗೆ ತಮ್ಮ ನಾಟಿ ಔಷಧಿಯಿಂದಲೇ ಗುಣ ಪಡಿಸುತ್ತಿದ್ದ ಸಾಗರ ತಾಲೂಕಿನ ನರಸೀಪುರದ ನಾಟಿ ವೈದ್ಯ ನಾರಾಯಣ ಮೂರ್ತಿ (80) ಅವರು ನಿನ್ನೆ ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ಹಲವು ದಶಕದಿಂದ ಇವರು ಮಧುಮೇಹ, ಅಲರ್ಜಿ, ಕ್ಯಾನ್ಸರ್, ಚರ್ಮರೋಗ ಸೇರಿದಂತೆ ಹಲವು ಮಾರಕ ರೋಗಗಳಿಗೆ ಔಷಧಿ ನೀಡುತ್ತಿದ್ದರು. ಇವರ ಬಳಿ ನಾಟಿ ಔಷಧಿ ಪಡೆಯಲು ದೇಶದ ವಿವಿಧ ರಾಜ್ಯಗಳಿಂದ ಜನರು ಆಗಮಿಸಿದ್ದರು.
ಇವರು ಪತ್ನಿ ಮಗ ನಾಲ್ಕು ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧುಮಿತ್ರರನ್ನು ಬಿಟ್ಟು ಅಗಲಿದ್ದಾರೆ. ಇವರ ಅಕಾಲಿಕ ಮರಣಕ್ಕೆ ಶಿವಮೊಗ್ಗ ಜಿಲ್ಲಾ ಸಂಸದರಾದ ರಾಘವೇಂದ್ರ, ಸಾಗರ ಕ್ಷೇತ್ರದ ಹರತಾಳ ಹಾಲಪ್ಪ ಸೇರಿದಂತೆ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ.