ಕುಂಭಮೇಳದಿಂದಾಗಿ ದೇಶದಾದ್ಯಂತ ಕೊರೋನಾ ಹರಡಿತು ಎಂಬ ಸುಳ್ಳನ್ನು ಹಬ್ಬಿಸಿಸಾಧು ಸಂತರ ಮೇಲೆ ಕೆಸರೆರಚುವುದು ದೊಡ್ಡ ಪಾಪ ! - ಸ್ವಾಮಿ ಗೋವಿಂದದೇವಗಿರಿಜೀ

  • 14 Jan 2024 , 9:50 PM
  • Uttarpradesh
  • 120

  ಭಾರತ ​​ವನ್ನು  ಅಸ್ಥಿರಗೊಳಿಸಲು ‘ಕುಂಭಮೇಳದಿಂದಾಗಿ ದೇಶದಾದ್ಯಂತ ಕೊರೋನಾ ಹರಡಿತು’ ಎಂಬ ಅಪಪ್ರಚಾರವನ್ನು ಮಾಡಲು ‘ಟೂಲ್‌ಕಿಟ್’ಅನ್ನು ಉಪಯೋಗಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಕೋರಿಕೆಯ ಮೇರೆಗೆ ಕುಂಭಮೇಳ ಇನ್ನೂ ಬಾಕಿ ಉಳಿದಿದ್ದರೂ ಸಾಧುಸಂತರು ಕುಂಭವನ್ನು ಮುಕ್ತಾಯಗೊಳಿಸಿದರು.

ಹರಿದ್ವಾರದಲ್ಲಿನ ಅನೇಕ ಮಠಗಳು ಮತ್ತು ರಸ್ತೆಗಳು ಖಾಲಿಯಾಗಿದ್ದವು. ಇದಕ್ಕಾಗಿ ಸಾಧುಸಂತರನ್ನು ಅಭಿನಂದಿಸಬೇಕಾಗಿತ್ತು. ಬದಲಾಗಿ ‘ಅವರು ದೇಶದಾದ್ಯಂತ ಕೊರೋನಾವನ್ನು ಹಬ್ಬಿಸಿದ್ದಾರೆ’ ಎಂದು ಹೇಳುವುದು ದೊಡ್ಡ ಪಾಪವೇ ಆಗಿದೆ. ದೇಶದ ಅನೇಕ ಮಾಧ್ಯಮಗಳು, ಲೇಖಕರು ವಿದೇಶಿ ಶಕ್ತಿಗಳಿಗೆ ತಮ್ಮನ್ನು ತಾವು ಮಾರಿಕೊಂಡಿರುವುದು ಭಾರತಕ್ಕೆ ದುರದೃಷ್ಟಕರವಾಗಿದೆ. ಆದ್ದರಿಂದ ಭಾರತೀಯ ಸಂಸ್ಕೃತಿ, ನಂಬಿಕೆ, ಧರ್ಮ ಮತ್ತು ಸಂಪ್ರದಾಯದ ಮೇಲೆ ಆಕ್ರಮಣ ಮಾಡುವ ಯಾವುದೇ ಅವಕಾಶವನ್ನು ಅವರು ಕಳೆದುಕೊಳ್ಳುವುದಿಲ್ಲ. ರಾಜಕೀಯ ಸ್ವಾರ್ಥಕ್ಕಾಗಿ ಸುಳ್ಳನ್ನು ಹರಡುವುದು ಅವರಿಗೆ ಶೋಭಿಸುವುದಿಲ್ಲ.

ಭಾರತೀಯರು ಇಂತಹ ದುಷ್ಕೃತ್ಯವನ್ನು ಕಾನೂನಿನ ಮಾರ್ಗದಲ್ಲಿ ವಿರೋಧಿಸಬೇಕು, ಎಂದು ‘ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸ್’ ಅಯೋಧ್ಯೆಯ ಖಜಾಂಚಿ ಸ್ವಾಮಿ ಗೋವಿಂದದೇವಗಿರಿಜೀ ಮಹಾರಾಜರು ಹೇಳಿದರು. ಅವರು ‘ಹಿಂದೂ ಜನಜಾಗೃತಿ ಸಮಿತಿ’ಯು ಆಯೋಜಿಸಿದ ‘ಕುಂಭಮೇಳಕ್ಕೆ ಅಪಕೀರ್ತಿ ತರುವ ರಾಜಕೀಯ ಪಿತೂರಿ’, ಈ ‘ವಿಶೇಷ ಆನ್‌ಲೈನ್ ಚರ್ಚಾಗೋಷ್ಠಿ’ಯಲ್ಲಿ ಮಾತನಾಡುತ್ತಿದ್ದರು. ಈ ಕಾರ್ಯಕ್ರಮವನ್ನು ಸಮಿತಿಯ ಜಾಲತಾಣ Hindujagruti.org, ಯೂಟ್ಯೂಬ್ ಮತ್ತು ಟ್ವಿಟರ್ ಮೂಲಕ 4179 ಜನರು ವೀಕ್ಷಿಸಿದ್ದಾರೆ.

ಈ ಸಮಯದಲ್ಲಿ, ರಾಷ್ಟ್ರ ಮತ್ತು ಧರ್ಮದ ಕಾರ್ಯಕ್ರಮಗಳನ್ನು ನಡೆಸುವ ‘ಜಂಬೂ ಟಾಕ್ಸ್’ ಈ ಯೂ ಟ್ಯೂಬ್ ವಾಹಿನಿಯ ನಿರ್ದೇಶಕರಾದ ಶ್ರೀ. ನಿಧೀಶ ಗೋಯಲ್ ಅವರು, ವೈಮನಸ್ಸನ್ನು ಹರಡಲು ಭಾರತದಲ್ಲಿ ‘ಟೂಲ್‌ಕಿಟ್’ಅನ್ನು ಬಹಳ ಸಮಯದಿಂದ ಬಳಸಲಾಗುತ್ತಿದೆ ಎಂದು ಹೇಳಿದರು. ಮೊದಲು ಅಂತರರಾಷ್ಟ್ರೀಯ ಮಾಧ್ಯಮಗಳಾದ ‘ನ್ಯೂಯಾರ್ಕ್ ಟೈಮ್ಸ್’, ‘ಟೈಮ್’, ಮತ್ತು ‘ಅಲ್ ಜಜೀರಾ’ ಈ ಮಾಧ್ಯಮಗಳು ಕುಂಭಮೇಳದ ಬಗ್ಗೆ ಅಪಪ್ರಚಾರವನ್ನು ಮಾಡಲು ಪ್ರಾರಂಭಿಸಿದವು.

ನಂತರ ಭಾರತದಲ್ಲಿ ಅವರ ಕೈಗೊಂಬೆಗಳು ಅಪಪ್ರಚಾರವನ್ನು ಹರಡಲು ಪ್ರಾರಂಭಿಸಿದವು. ಚುನಾವಣೆಯ ನಂತರ ಬಂಗಾಲದಲ್ಲಿ ನಡೆದ ಹಿಂಸಾತ್ಮಕ ದಾಳಿಗೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಲಿಲ್ಲ; ಆದರೆ, ‘ಟೂಲ್‌ಕಿಟ್’ ಪ್ರಕರಣದಲ್ಲಿ ಟ್ವಿಟರ್‌ನ ದೆಹಲಿ ಕಚೇರಿಯಲ್ಲಿ ಪೊಲೀಸರು ಕೈಗೊಂಡ ಕ್ರಮಕ್ಕೆ ಕಾಂಗ್ರೆಸ್ ತಕ್ಷಣ ಆಕ್ಷೇಪ ವ್ಯಕ್ತಪಡಿಸಿದೆ, ಇದು ತಿಳಿದುಕೊಳ್ಳಬೇಕು.

ಈ ಸಮಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತೀಸ್‌ಗಡ ರಾಜ್ಯದ ಸಂಘಟಕರಾದ ಶ್ರೀ. ಸುನಿಲ್ ಘನವಟ್ ಅವರು, ತಬಲಿಗಿ ಮರ್ಕಜ್ ಅನ್ನು ಕುಂಭ ಮೇಳದೊಂದಿಗೆ ಹೋಲಿಸುವುದು ತಪ್ಪು; ಏಕೆಂದರೆ ತಬಲಿಗಿಗಳು ಅನುಮತಿಯಿಲ್ಲದೆ ಕಾರ್ಯಕ್ರಮವನ್ನು ನಡೆಸಿದರು. ಪೊಲೀಸರು ಬಂದಾಗ ತಬಲಿಗಿಗಳು ಓಡಿಹೋದರು, ಮತ್ತು ಅನೇಕ ತಬಲಿಗಿಗಳು ತಮಗೆ ಕೊರೋನಾ ಆಗಿರುವುದನ್ನು ಮುಚ್ಚಿಟ್ಟರು.

ಕೊರೋನಾ ಪೀಡಿತ ತಬಲಿಗಿಯರು ದಾದಿಯರ ಮತ್ತು ವೈದ್ಯರ ಜೊತೆ ಅಸಭ್ಯವಾಗಿ ವರ್ತಿಸಿದರು. ತದ್ವಿರುದ್ಧವಾಗಿ ಕುಂಭಮೇಳಕ್ಕೆ ಬರುವ ಎಲ್ಲರಿಗೂ ಕೊರೋನಾ ನೆಗೆಟಿವ್ ಪ್ರಮಾಣಪತ್ರವನ್ನು ಕಡ್ಡಾಯಗೊಳಿಸಲಾಗಿತ್ತು. ಅನೇಕ ಮಠ-ಆಶ್ರಮಗಳಲ್ಲಿ ಕೊರೋನಾ ನೆಗೆಟಿವ್ ಪ್ರಮಾಣಪತ್ರ ಕಡ್ಡಾಯವಾಗಿದೆ ಎಂದು ಫಲಕಗಳನ್ನು ಅಳವಡಿಸಿಲಾಗಿತ್ತು. ಆದ್ದರಿಂದ ಕುಂಭಮೇಳದಿಂದಾಗಿ ದೇಶದಾದ್ಯಂತ ಕೊರೋನಾ ಹರಡುವ ಬಗ್ಗೆ ಸುಳ್ಳು ಪ್ರಚಾರ ಮಾಡಿದ್ದಕ್ಕಾಗಿ ಕಾಂಗ್ರೆಸ್ ದೇಶದ ಕ್ಷಮೆಯಾಚಿಸಬೇಕು, ಎಂದು ಒತ್ತಾಯಿಸಿದರು. 

ಈ ಸಮಯದಲ್ಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಶ್ರೀ. ರಾಜೇಂದ್ರ ವರ್ಮಾರವರು, ಕುಂಭಮೇಳದಂತಹ ಧಾರ್ಮಿಕ ಶ್ರದ್ಧೆಗಳನ್ನು ಅವಮಾನಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದು ಅದಕ್ಕಾಗಿ ಎಲ್ಲ ಹಿಂದೂಗಳು ಸಂಘಟಿತರಾಗಿ ಮೊದಲು ತಮ್ಮ ಭಿನ್ನಾಭಿಪ್ರಾಯಗಳನ್ನು ದೂರಗೊಳಿಸಬೇಕು.

ಇದರಿಂದ ವಿರೋಧಿ ಶಕ್ತಿಯ ಸೋಲು ಖಚಿತವಾಗುವುದು ಎಂದು ಅಭಿಪ್ರಾಯಪಟ್ಟರು.

Read All News