ಕೋರೊನಾ ಭೀತಿ ನಡುವೆ ಉತ್ಸಾಹದಿಂದ ಪರೀಕ್ಷೆಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳು

  • 15 Jan 2024 , 6:16 AM
  • Belagavi
  • 102
ಬೆಳಗಾವಿ : ಇಂದಿನಿಂದ ಎಸ್.ಎಸ್.ಎಲ್.ಸಿ ಪರೀಕ್ಷೆ ಹಿನ್ನಲೆ ವಿದ್ಯಾರ್ಥಿಗಳಿಗೆ ಸಕಲ ವ್ಯವಸ್ಥೆ ಮಾಡಿದ ಬೆಳಗಾವಿ ಜಿಲ್ಲಾಡಳಿತ ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಎರಡು ಜಿಲ್ಲೆಗಳಲ್ಲು ಸಕಲ ಸಿದ್ಧತೆಯನ್ನು ಮಾಡಲಾಗಿದೆ. ಬೆಳಗಾವಿ ಶೈಕ್ಷಣಿಕ ಜಿಲ್ಲೆಯ 7 ವಲಯಗಳಲ್ಲಿ 124 ಕೇಂದ್ರಗಳಿದ್ದು 36,327 ವಿದ್ಯಾರ್ಥಿಗಳು ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 147 ಕೇಂದ್ರಗಳಲ್ಲಿ 40834 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ನಕಲು ತಡೆಯುವ ದೃಷ್ಟಿಯಿಂದ ಎಲ್ಲ ಕೇಂದ್ರಗಳಲ್ಲೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. 124 ಸ್ಥಾನಿಕ ಜಾಗೃತ ದಳಗಳು, 104 ಮುಖ್ಯ ಸೂಪರಿಂಟೆಂಡೆಂಟ್‌ಗಳು, 30 ಉಪ ಮುಖ್ಯ ಸೂಪರಿಂಟೆಂಡೆಂಟ್‌ಗಳು, 1,923 ಕೊಠಡಿ ಮೇಲ್ವಿಚಾರಕರನ್ನು ಹಾಗೂ 44 ಮಾರ್ಗಾಧಿಕಾರಿಗಳು ಹಾಗೂ 65 ಜಿಲ್ಲಾಮಟ್ಟದ ವೀಕ್ಷಕರನ್ನು ಶಿಕ್ಷಣ ಇಲಾಖೆ ನೇಮಿಸಿಸಲಾಗಿದೆ. ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 58 ವಿದ್ಯಾರ್ಥಿಗಳು ಕಂಟೈನ್ಮೆಂಟ್‌ ಝೋನ್‌ (ನಿರ್ಬಂಧಿತ ಪ್ರದೇಶ) ವ್ಯಾಪ್ತಿಯಿಂದ ಬಂದವರು ಇವರಲ್ಲಿ 44 ಮಂದಿ ಬೆಳಗಾವಿ ತಾಲ್ಲೂಕು, 3 ಜನ ಕಿತ್ತೂರು ಹಾಗೂ 11 ಮಂದಿ ಸವದತ್ತಿ ತಾಲ್ಲೂಕಿನವರಿದ್ದು ಈ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆಯನ್ನು ಮಾಡಲಾಗಿದೆ. ಜಿಲ್ಲೆಯಲ್ಲಿ ಒಬ್ಬ ಸೋಂಕಿತ ವಿದ್ಯಾರ್ಥಿ ಹಾಗೂ ಕ್ವಾರಂಟೈನ್‌ನಲ್ಲಿರುವ ಇಬ್ಬರು ವಿದ್ಯಾರ್ಥಿಗೆ ಪರೀಕ್ಷೆಗೆ ಹಾಜರಾಗಲು ಅವಕಾಶವನ್ನು ನೀಡಿ ಪ್ರತ್ಯೇಕ ಕೊಠಡಿ ವಸ್ಥೆಯನ್ನು ಜಿಲ್ಲಾಡಳಿತ ಮಾಡಿದೆ. ಕೋರೊನಾ ಭೀತಿಯ ನಡುವೆಯೂ ಉತ್ಸಾಹದಿಂದ ಪರೀಕ್ಷೆಗೆ ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಜೊತೆಗೆ ಕೆಲವು ಕಡೆ ಪರೀಕ್ಷಾ ಕೇಂದ್ರಗಳ ಮುಂಭಾಗದಲ್ಲಿ ಪೋಷಕರು ಜಮಾಯಿಸಿದ್ದು. ತಪಾಸಣೆ ಬಳಿಕ ಸಾಮಾಜಿಕ ಅಂತರದೊಂದಿಗೆ ಸಿಬ್ಬಂದಿಗಳು ವಿದ್ಯಾರ್ಥಿಗಳನ್ನು ಕೊಠಡಿಗೆ ಕಳುಹಿಸುತ್ತಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಬಿಗಿಭದ್ರತೆ ಮಾಡಿದ್ದು ಪರೀಕ್ಷಾ ಕೇಂದ್ರದ 200 ಮೀಟರ್ ಅಂತರದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಒಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು
ಶಿಕ್ಷಣ ಇಲಾಖೆ ಕಲ್ಪಿಸುತ್ತಿದೆ.

Read All News