ಯಮಕನಮರಡಿ: "ಕೊರೊನಾ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಹರಡುತ್ತಿದೆ. ಹೀಗಾಗಿ, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ತಪಾಸಣೆಗೆ ಒಳಪಡಬೇಕು" ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ಸತೀಶ ಜಾರಕಿಹೊಳಿ ಅವರು ಯಮಕನಮರಡಿ ಗ್ರಾಮಸ್ಥರಿಗೆ ಮನವಿ ಮಾಡಿದರು.
ಯಮಕನಮರಡಿ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಭಾನುವಾರ ಸಂಜೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, "ಗ್ರಾಮಸ್ಥರು ಕೋವಿಡ್ ಬಗ್ಗೆ ಯಾವುದೇ ಕಾರಣಕ್ಕೂ ಭಯಪಡುವ ಅಗತ್ಯವಿಲ್ಲ. ಗೊಂದಲಕ್ಕೆ ಒಳಗಾಗದೇ ಪರೀಕ್ಷೆ ಮಾಡಿಸಿಕೊಳ್ಳಿ" ಎಂದರು.
"ಸೋಂಕಿನ ಲಕ್ಷಣಗಳು ಕಂಡುಬಂದರೆ ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್ ಗೆ ದಾಖಲಾಗಿ, ಅಥವಾ ವೈದ್ಯರ ಸಲಹೆ ಮೇರೆಗೆ ಮನೆಯಲ್ಲೇ ಚಿಕಿತ್ಸೆ ಪಡೆಯಿರಿ. ಯಾವುದೇ ಸಂದರ್ಭದಲ್ಲಾದರು ಕ್ಷೇತ್ರದ ಪ್ರತಿಯೊಬ್ಬರ ನೆರವಿಗೂ ನಾವು ಇದ್ದೇವೆ" ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಾವೀದ್ ಜಕಾತಿ, ಓಂಕಾರ್ ತುಬಚಿ, ಅಸ್ಲಂ ಪಕಾಲಿ, ಶಿವಶಂಕರ್ ಜುಟ್ಟಿ, ಮಹಾಂತೇಶ ಮಗದುಮ್, ರವಿ ಜಿಂಡ್ರಾಳಿ, ಮಹಾದೇವ ಪಟೋಳಿ, ಸದಾನಂದ ಗುಡಿಕಡೆ, ದೇವಪ್ಪ ಹುನ್ನೂರಿ, ಪ್ರಕಾಶ್ ಬರಗಾಲಿ, ಗಿರೀಶ್ ಮಿಶ್ರಿಕೋಟಿ, ಗುಲಾಬ ರಜಪೂತ ಸೇರಿ ಉಪಸ್ಥಿತರಿದ್ದರು.