ಪರೀಕ್ಷೆಗೆ ಹೆದರಿ SSLC ವಿದ್ಯಾರ್ಥಿನಿ ಆತ್ಮಹತ್ಯೆ
- 14 Jan 2024 , 9:43 PM
- Belagavi
- 110
ಬೆಳಗಾವಿ : ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ ಪರೀಕ್ಷೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ನಗರದ ವಡಗಾವಿಯಲ್ಲಿ ನಡೆದಿದೆ. ಬೆಳಗಾವಿ ನಗರದ ವಡಗಾವಿ ಪ್ರದೇಶದ, ಕಲ್ಮೇಶ್ವರ ರಸ್ತೆಯ ನಿವಾಸಿ ಸುಜಾತ ಸುಭಾಷ್ ಡಗೆ ಎಂಬ ಮೃತ ದುರ್ದೈವಿ ಕೋವಿಡ್ 19 ನಿಂದಾಗಿ SSLC ಪರೀಕ್ಷೆ ರದ್ದಾಗಬಹುದೆಂಬ ನಿರೀಕ್ಷೆಯಲ್ಲಿದ್ದ 16 ವರ್ಷದ ಬಾಲಕಿ ಸುಜಾತಾ ನಿನ್ನೆ ತಡರಾತ್ರಿಯವರೆಗೂ ಪರೀಕ್ಷೆ ರದ್ದಾಗಬಹುದೆಂಬ ನಿರೀಕ್ಷೆಯಲ್ಲಿದ್ದಳು ಆದರೆ ಕೊನೆಗೆ ಪರೀಕ್ಷೆ ನಡೆಯುತ್ತವೆ ಎಂದು ಖಾತ್ರಿಯಾದ ಬಳಿಕ ನಿನ್ನೆ ರಾತ್ರಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇದಕ್ಕೆ ಸಂಬಂಧಿಸಿದಂತೆ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.