ಸೇವಾ ಹಿ ಸಂಘಟನೆ ಕಾರ್ಯಕರ್ತರ ಮನಸ್ಸು ಇಮ್ಮಡಿಗೊಳಿಸಲಿದೆ: ಸಂಜಯ ಪಾಟೀಲ

  • 15 Jan 2024 , 12:46 AM
  • Belagavi
  • 103

ಬೆಳಗಾವಿ :ಪ್ರಧಾನ ಮಂತ್ರಿ ನರೇಂದ್ರ ಮೊದಿಜಿಯವರ 7ವರ್ಷಗಳ ಅಧಿಕಾರವಧಿ ತುಂಬಿದ ಸಂದರ್ಭದಲ್ಲಿ ರಾಷ್ಟ್ರಾಧ್ಯಕ್ಷರಾದ ಜಿ.ಪಿ.ನಡ್ಡಾ ಅವರ ಕರೆಯ ಮೇರೆಗೆ ಸೇವಾ ಹೀ ಸಂಘಟನಾ ಅಡಿಯಲ್ಲಿ ಜಿಲ್ಲೆಯಾದ್ಯಂತ ಚುನಾಯಿತ ಪ್ರತಿನಿಧಿಗಳು ಹಾಗೂ ಕಾರ್ಯಕರ್ತರ ಸೇವೆಗೆ ಜನಸಾಮಾನ್ಯರು ವ್ಯಕ್ತಪಡಿಸಿದ ಪ್ರಶಂಸೆಯಿಂದ ಬಿಜೆಪಿ ಕಾರ್ಯಕರ್ತರ ಸೇವಾ ಮನೊಭಾವನೆ ಇಮ್ಮಡಿಯಾಗಿದೆ ಎಂದು ಬೆಳಗಾವಿ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಸಂಜಯ ಪಾಟೀಲ ಹೇಳಿದರು.

ಮೇ 30 ಮತ್ತು 31ರಂದು ಜಿಲ್ಲೆಯಾದ್ಯಂತ ಕೈಗೊಂಡ ಸೇವಾ ಚಟುವಟಿಕೆಗಳ ಮಾಹಿತಿಯನ್ನೊಳಗೊಂಡ ಪತ್ರಿಕಾ ಪ್ರಕಟಣೆ ಹೊರಡಿಸಿದ ಅವರು, ಜಿಲ್ಲೆಯಲ್ಲಿ ಕರೊನಾ ಮಹಾಮಾರಿಯ ಅರ್ಭಟ ಎಷ್ಟೇ ಇದ್ದರು ಅದನ್ನು ತಡೆಗಟ್ಟಲು ಹೋರಾಡುತ್ತಿರುವ ಕರೊನಾ ವಾರಿಯರ್ಸ ಜೋತೆಯಲ್ಲಿ ಬಿಜೆಪಿ ಕಾರ್ಯಕರ್ತರು ಯಾವುದಕ್ಕು ಹೆದರದೆ ಹಗಲಿರಿಳು ಮಾಡಿದ ಸೇವೆ ಅನನ್ಯ.

ಕಳೆದ ಏರಡು ದಿನಗಳಿಂದ ಬಿಜೆಪಿ ನೆತೃತ್ವದ ಕೇಂದ್ರದ ಮೊದಿಜಿ ಸರ್ಕಾರ 2ನೇಯ ಅವಧಿ 2 ವರ್ಷ ಪೂರ್ಣಗೊಳಿಸಿದ ಸಂದರ್ಭದಲ್ಲಿ ಜಿಲ್ಲೆಯ 9 ಮಂಡಳಗಳಲ್ಲಿ 1414ಪದಾಧಿಕಾರಿಗಳು 2104 ಚುನಾಯಿತ ಪ್ರತಿನಿಧಿಗಳು ಸೇವಾ ಕಾರ್ಯದಲ್ಲಿ ತೊಡಗಿಕೊಂಡು 570 ಹಳ್ಳಿಗಳಲ್ಲಿ ಹಾಗೂ 355ನಗರ, ಪಟ್ಟಣ ಮತ್ತು ಪುರಸಭೆಯ ವಾರ್ಡಗಳಲ್ಲಿ ವಿವಿಧ ರೀತಿಯ ಸೇವೆ ಮಾಡುವ ಮೂಲಕ ಜನಸಾಮಾನ್ಯರ ಬೆನ್ನಿಗೆ ಬಿಜೆಪಿ ಕಾರ್ಯಕರ್ತರು ಇದ್ದಾರೆ ಎನ್ನುವದನ್ನ ಎತ್ತಿ ತೊರಿದ್ದಾರೆ.

ಸುಮಾರು 1414 ಬೂತಗಳಲ್ಲಿ ಸಾಮಾಜಿಕ ಜಾಗೃತಿ ನಡೆದರೆ 55700ಮಾಸ್ಕ್ ವಿತರಣೆ 25100ಸೆನಿಟೈಜರ್ ಬಾಟಲ್ ಗಳು 52ಸಾವಿರ ಇಮ್ಯನಿಟಿ ಬೂಸ್ಟ್ ಔಷಧಿ, ಸಾವಿರಕ್ಕು ಹೆಚ್ಚು ಮೆಡಿಸಿನ್ ಕಿಟ್, 6ಸಾವಿರ ರೇಶೆನ್ ಕಿಟ್ 6ಸಾವಿರದಾ ಮೂರುನೂರು ಆಹಾರ ಕಿಟ್ ವಿತರಿಸುವ ಮೂಲಕ ಕೊವಿಡ್ ಸಂಕಷ್ಟದ ಜನತೆಗೆ ಸ್ಪಂದಿಸಲಾಗಿದೆ.

ಕೊವಿಡ್ ವ್ಯಾಕ್ಸಿನ್ ತಗೆದುಕೊಳ್ಳುವಂತೆ ಜನರಲ್ಲಿ ಸಾಮಾಜಿಕ ಜಾಲತಾಣಗಳ ಹಾಗೂ ದೂರವಾಣಿಗಳ ಮೂಲಕ ಲಕ್ಷಾಂತಾರ ಜನರಲ್ಲಿ ಜಾಗೃತಿ ಮೂಡಿಸುವದರೊಂದಿಗೆ 1ಲಕ್ಷ 32 ಸಾವಿರ ಜನರ ಆಕ್ಸಿಜನ್ ಲೆವಲ್ ಹಾಗೂ ದೇಹದ ಉಷ್ಣಾಂಶದ ಪರೀಕ್ಷೆ ಮಾಡಲಾಗಿದೆ. ಜಿಲ್ಲೆಯ ಪ್ರತಿಯೊಂದು ಮಂಡಲದಲ್ಲಿ ಸ್ವಚ್ಛತಾ ಅಭಿಯಾನ 312 ಸ್ಥಳಗಳಲ್ಲಿ ವೃಕ್ಷಾರೊಪಣ,ಕರೊನಾ ಸೊಂಕಿತರ ಉಚಿತ ಸೇವೆಗಾಗಿ ಅಂಬುಲೆನ್ಸ್ ನೀಡಿರುವದು, ನೂರಾರು ಹಳ್ಳಿಗಳಲ್ಲಿ ಸೆನಿಟೈಜ ಮಾಡಲು ಉಚಿತ ಔಷಧಿ ಹಾಗೂ ಕೆಲ ಕಡೆಯಲ್ಲಿ ವಾಹನ ಒದಗಿಸಲಾಗಿದೆ.

ಕೊವಿಡ್ ಸೊಂಕಿತದಿಂದ ಮೃತರಾದವರ ಅಂತ್ಯ ಕ್ರೀಯೆ ನಡೆಸಲಾಗಿದ್ದು ಜಿಲ್ಲೆಯ ಜನತೆಗೆ ಸೇವೆ ನೀಡಿದ ಸಮಾಧಾನ ಒಂದು ಕಡೆಯಾದರೆ ಅವರ ಹಾರೈಕೆಯ ಸಮರ್ಪಣಾ ಭಾವ ನಮ್ಮನ್ನು ಸೇವೆ ಮಾಡಲು ಇನ್ನಷ್ಟು ಪ್ರೇರಣೆ ನೀಡಿದೆ. ಬಿಜೆಪಿ ಪಕ್ಷ ತತ್ವ ಸಿದ್ದಾಂತ ಅಧಿಕಾರ ಮುಖ್ಯವಲ್ಲ ಜನರ ಸೇವೆ ಬಹುಮುಖ್ಯ ಎನ್ನುವ ಅಡಿಯಲ್ಲಿ ಕೆಲಸ ಮಾಡುವ ಶಿಸ್ತು ಬದ್ದ ಪಾರ್ಟಿಯಾಗಿದ್ದು ಅದನ್ನು ನಾವು ಇಂತಹ ಸಂಕಷ್ಟದ ಸ್ಥಿತಿಯಲ್ಲಿಯು ನಿಭಾಯಿಸಿರುವ ತೃಪ್ತಿ ನಮಗಿದೆ.

ಈ ಎಲ್ಲ ಕಾರ್ಯಗಳ ಅನುಷ್ಠಾನಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ ಮೊಹಿತೆ, ಸುಭಾಷ್ ಪಾಟೀಲ, ಸಂದೀಪ ದೇಶಪಾಂಡೆ, ಖಜಾಂಚಿ ಮಲ್ಲಿಕಾರ್ಜುನ ಮಾದಮ್ಮನವರ, ಮಾಧ್ಯಮ ಸಂಚಾಲಕ ಎಫ್.ಎಸ್.ಸಿದ್ದನಗೌಡರ, ಸಾಮಾಜಿಕ ಜಾಲತಾಣ ಪ್ರಮುಖ ನೀತಿನ ಚೌಗುಲೆ, ಕಾರ್ಯಾಲಯ ಕಾರ್ಯದರ್ಶಿ ವೀರಭದ್ರಯ್ಯ ಪೂಜಾರ, ಜಿಲ್ಲೆಯ ಉಪಾಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಮಂಡಲ‌ ಅಧ್ಯಕ್ಷರು, ಪದಾಧಿಕಾರಿಗಳ ಮತ್ತು ಪಾರ್ಟಿಯ ಕಾರ್ಯಕರ್ತರ ಸಹಕಾರ ಬೂತ ಮಟ್ಟದ ವರೆಗೆ ಸೇವಾ ಕಾರ್ಯ ಮಾಡಲು ಸಹಕಾರಿಯಾಗಿದೆ ಎಂದರು.

Read All News