ದೆಹಲಿ ಕೋವಿಡ-19 ದಿಂದ ಗ್ರಾಮೀಣ ಪ್ರದೇಶಗಳು ಅತೀ ಹೆಚ್ಚು ಹಾನಿಗೊಳಗಾಗುತ್ತಿರುವುದರಿಂದ, ಅತೀ ಹೆಚ್ಚು ಪರೀಕ್ಷೆ ಮಾಡುವುದು ಅತ್ಯಗತ್ಯವಾಗಿದೆ.
ಕೆಲವು ನಗರಗಳಲ್ಲಿ ಇಂತಹ ಪರೀಕ್ಷೆಗಳು ಒಂದು ವಾರಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿವೆ ಹಾಗಾದರೆ ಇದು ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ಸವಾಲುಗಳನ್ನು ಹುಟ್ಟುಹಾಕುತ್ತದೆ.
ಆರ್ಟಿಪಾರ್ಕ್, ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಬೆಂಬಲದೊಂದಿಗೆ ಬೆಂಗಳೂರು ಮೂಲದ ಹೆಲ್ತಟೆಕ್ ಸ್ಟಾರ್ಟ್ಅಪ್ ನಿರಮೈ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸಹಯೋಗದೊಂದಿಗೆ ವಾಟ್ಸಾಪ್ ಮೂಲಕ ಕಡಿಮೆ-ರೆಸಲ್ಯೂಶನ ಎಕ್ಸ್-ರೇ ಚಿತ್ರದ ಮೂಲಕ ಸಹ ಕೋವಿಡ್ ರೋಗಿಗಳನ್ನು ಗುರುತಿಸಲು ಎಕ್ಸರೇಸೇತುವನ್ನು ಅಭಿವೃದ್ಧಿಪಡಿಸಿವೆ.
ವೈದ್ಯರು ಕೇವಲ www.xraysetu.com ಗೆ ಭೇಟಿ ನೀಡಿ ‘ಟ್ರೈ ದಿ ಫ್ರೀ ಎಕ್ಸ್‌ರೇಸೆತು ಬೀಟಾ’ ಬಟನ್ ಕ್ಲಿಕ್ ಮಾಡಬೇಕಾಗುತ್ತದೆ. ಇ ಪ್ಲಾಟ್‌ಫಾರ್ಮ್ ಮತ್ತೊಂದು ಪುಟಕ್ಕೆ ಒಯ್ಯುತ್ತದೆ, ಅದರಲ್ಲಿ ವೆಬ್ ಅಥವಾ ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಮೂಲಕ ವಾಟ್ಸಾಪ್ ಆಧಾರಿತ ಚಾಟ್‌ಬಾಟ್‌ನೊಂದಿಗೆ ತೊಡಗಿಸಿಕೊಳ್ಳಲು ಆಯ್ಕೆ ಮಾಡಬಹುದು.
ಅಥವಾ ವೈದ್ಯರು ಎಕ್ಸ್‌ರೇಸೆತು ಸೇವೆಯನ್ನು ಪ್ರಾರಂಭಿಸಲು +91 8046163838 ದೂರವಾಣಿ ಸಂಖ್ಯೆಗೆ ವಾಟ್ಸಾಪ್ ಸಂದೇಶವನ್ನು ಕಳುಹಿಸಬಹುದು.
ನಂತರ ಅವರು ರೋಗಿಯ ಎಕ್ಸರೆ ಚಿತ್ರವನ್ನು ಕ್ಲಿಕ ಮಾಡಿ ಎಕ್ಸರೇಸೇತು ವಾಟ್ಸಪ್ಪ ನಂಬರಗೆ ಕಳುಹಿಸಬೇಕಾಗುತ್ತದೆ ಮತ್ತು ಕೆಲವೆ ನಿಮಿಷಗಳಲ್ಲಿ 2 ಪುಟಗಳ ಡೀಟೈಲ್ಡ ರಿಪೋರ್ಟ್ ಪಡೆಯಬಹುದು.