ಬೆಳಗಾವಿಕೋವಿಡ್-19 ಸಂಕ್ರಾಮಿಕ ಪಿಡುಗಿನ ಈ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆ ಎಂದಾಕ್ಷಣ ಹಿಂಜರಿಯುವ ಸಾರ್ವಜನಿಕರು ಜೀವ ಭಯದಿಂದ ಖಾಸಗಿ ಆಸ್ಪತ್ರೆಗಳತ್ತ ಮುಖಮಾಡುತ್ತಿರುವದು ಸರ್ವೆ ಸಾಮಾನ್ಯವಾಗಿದೆ.
ಇಂದಿನ ದಿನದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿಯೂ ನುರಿತ ತಜ್ಞ ವೈಧ್ಯರು ಇದ್ದಾರೆ. ಎಲ್ಲ ಆಧುನಿಕ ಯಂತ್ರೋಪಕರಣಗಳು ಇವೆ. ಈ ನಿಟ್ಟಿನಲ್ಲಿ ಸರ್ಕಾರಿ ಆಸ್ಪತ್ರೆಗಳು ಖಾಸಗಿ ಆಸ್ಪತ್ರೆಗಳಿಗಿಂತ ಹೆಚ್ಚು ಸೌರ‍್ಯವನ್ನು ಹೊಂದಿವೆ ಎಂದರೆ ಅತಿಶಯೋಕ್ತಿ ಆಗಲಾರದು.
ಇತ್ತೀಚೆಗೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನಲ್ಲಿ ನಡೆದಂತಾ ಘಟನೆಯೆ ಸಾಕ್ಷಿಯಾಗಿದೆ ಸವದತ್ತಿ ತಾಲೂಕಿನ ಕುರುಬಗಟ್ಟಿ ಗ್ರಾಮದಲ್ಲಿ 60 ವರ್ಷ ವಯೋಮಾನದ ಒಬ್ಬರಿಗೆ ಕರೋನಾ ಪಾಸಿಟಿವ್ ಬರುತ್ತದೆ. ಮನೆಯಲ್ಲಿ ಯಾರೂ ಇರುವದಿಲ್ಲ ಈ ವಿಷಯ ಗೊತ್ತಾಗಿ ರಾಮದುರ್ಗ ತಾಲೂಕು ತಹಶೀಲ್ದಾರ್ ರಾಗಿ ಕರ‍್ಯ ನಿರ್ವಹಿಸುತ್ತಿರುವ ಮಲ್ಲಿಕಾರ್ಜುನ ಹೆಗ್ಗನ್ನವರ ಹಾಗೂ ರಾಮದುರ್ಗ ಸರಕಾರಿ ಆಸ್ಪತ್ರೆಯ ವೈಧ್ಯರಾದ ಡಾ.ಮಹೇಶ ಚಿತ್ತರಗಿ ಇಬ್ಬರೂ ಸೇರಿ 60 ವರ್ಷದ ವಯೋಮಾನದ ಕರೋನಾ ರೋಗಿಯ ಮನೆಗೆ ಭೇಟಿಕೊಟ್ಟು ಅವರಿಗೆ ಕರೋನಾ ಪಾಸಿಟಿವ್ ಬಂದಿರುವದು ಗೊತ್ತಾಗದಂತೆ ಧರ‍್ಯ ತುಂಬಿ ರಾಮದುರ್ಗ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಡಾ.ವರುಣ ಬೀಳಗಿ ಹಾಗೂ ಡಾ.ಮಹೇಶ ಚಿತ್ತರಗಿ ಅವರ ನೇತ್ರತ್ವದಲ್ಲಿ ಔಷದೋಪಚಾರ ನೀಡಿ ಆಕ್ಸಿಜನ್ ವ್ಯವಸ್ಥೆ ಮಾಡಿ ನಿಮಗೇನು ಆಗಿಲ್ಲ ಎನ್ನುತ್ತ ಮತ್ತೆ ಮತ್ತೆ ಪ್ರಿತಿ ವಿಶ್ವಾಸದ ಮಾತುಗಳನ್ನಾಡಿ ಮಾನವೀಯತೆ ಮೆರೆಯುವ ಮೂಲಕ ಕರೋನದಿಂದ ಬಳಲಿದ ಹಿರಿಯ ಜೀವಕ್ಕೆ ಬದುಕುವ ಚೈತನ್ಯ ನೀಡಿದ್ದಾರೆ. ಈಗ ಆ ಹಿರಿಯ ಜೀವ ಪೂರ್ಣ ಗುಣಮುಖರಾಗಿ ಮನೆಗೆ ಬಂದಿದ್ದು ಮಾನವೀಯತೆಗೆ ಹಿಡಿದ ಕನ್ನಡಿಯಾಗಿದೆ.
ಕೇವಲ ಸರ್ಕಾರ ಎಲ್ಲವನ್ನು ಮಾಡಲು ಸಾಧ್ಯವಿಲ್ಲ ಸರ್ಕಾರಿ ವ್ಯವಸ್ಥೆಯಲ್ಲಿ ಇರುವವರೂ ನಿಸ್ವಾರ್ಥದಿಂದ ಸೇವೆ ಸಲ್ಲಿಸಿದಾಗ ಮಾತ್ರ ಮಾನವೀಯತೆಗೆ ಅರ್ಥ ಬರುವುದರೊಂದಿಗೆ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ. ಕರೋನಾ ಒಂದು ಸಂಕ್ರಾಮಿಕ ಪಿಡುಗಾಗಿದ್ದು ಅದನ್ನು ನಿಭಾಯಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಗಲಿರುಳು ಶ್ರಮಿಸುತ್ತಿರುವದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ. ಕರೋನಾ ಕುರಿತಾಗಿ ಯಾವುದು ಸ್ಪಷ್ಟತೆ ಇರದಿವದರಿಂದ ಅದು ಸಂಕ್ರಾಮಿಕವಾಗಿ ಹಬ್ಬುವ ನಾನಾ ಉವಾಪೋಹಗಳಿದ್ದು , ಕರೋನಾ ರೋಗಿಗಳಲ್ಲಿಯೂ ಒಬ್ಬರಿಂದ ಒಬ್ಬರಿಗೆ ಅದರ ಲಕ್ಷಣಗಳು ಬೇರೆ ಬೇರೆಯಾಗಿರುವದನ್ನ ನಾವು ಕಾಣುತ್ತಿದ್ದೇವೆ.
ಜನಸಂಖ್ಯೆಗೆ ತಕ್ಕಂತೆ ಮೂಲ ಸೌರ‍್ಯಗಳ ಆಧಾರದ ಮೇಲೆ ಕರೋನಾ ರೋಗವನ್ನು ಔಷದೋಪಚಾರ, ಹಾಗೂ ಆಸ್ಪತ್ರೆ , ಹೀಗೆ ಬೇರೆ ಬೇರೆ ಕಾರಣಗಳ ಕೊರತೆಯಿಂದ ನಿಭಾಯಿಸುವದು ಕಷ್ಟವಾಗಿದ್ದರೂ ಸರ್ಕಾರ ಟೊಂಕ ಕಟ್ಟಿ ನಿಂತು ಜನ ಸಾಮಾನ್ಯರ ಜೀವವನ್ನು ಕಾಪಾಡುತ್ತಿರುವದು ಸ್ಪಷ್ಟ. ಅದಕ್ಕೆ ಪೂರಕವಾಗಿ ಸರ್ಕಾರಿ ಸಿಬ್ಬಂದಿಗಳು, ವೈಧ್ಯರು, ಹಗಲಿರಳೆನ್ನದೆ ಕರೋನಾ ರೋಗಿಗಳ ಸೇವೆಯನ್ನು ಮಾಡುವ ಮೂಲಕ ಜನ ಸಾಮಾನ್ಯರ ಮೆಚ್ಚುಗೆಯನ್ನು ಪಡೆದಿದ್ದಾರೆ.
ಸರ್ಕಾರವು ಕರೋನಾ ಕುರಿತಾಗಿ ಜನ-ಜಾಗ್ರತಿ ಮೂಡಿಸಿದರು ಜನ ಸಾಮಾನ್ಯ ಮಾತ್ರ ಅದಕ್ಕೆ ಕ್ಯಾರೆ ಅನ್ನದೆ ಕರೋನಾ ನಿಯಮ ಪಾಲಿಸದೆ ನಿರ್ಭಿತಿಯಿಂದ ಓಡಾಡಿ ಕರೋನಾ ಎಂಬ ಚಕ್ರದಲ್ಲಿ ಸಿಲುಕಿ ತೊಂದರೆಯನ್ನು ಅನುಭವಿಸುತ್ತಿರುವದು ವಿರ‍್ಯಾಸವೇ ಸರಿ.
ಅಷ್ಟೆ ಅಲ್ಲಾ ಮಾನವೀಯತೆಯನ್ನು ಮರೆತ ಮನುಷ್ಯ ಇದೆ ಸಂದರ್ಭವನ್ನು ಉಪಯೋಗಿಸಿಕೊಂಡು ಒಂದಿಲ್ಲೊAದು ಅಡ್ಡದಾರಿಯಿಂದ ಹಣವನ್ನು ಮಾಡಲು ಹೊರಟಿರುವದು ಖೇದದ ಸಂಗತಿಯಾಗಿದೆ. ನಾಲ್ಕು ಜನರ ಒಂದು ಚಿಕ್ಕ ಕುಟುಂಬವನ್ನು ನಿಭಾಯಿಸಲು ಪರದಾಡುವ ನಾವು 130 ಕೋಟಿ ಜನರನ್ನು ಹೇಗೆ ಸಂಬಾಳಿಸಬೇಕೆಂದು ಸರಕಾರಕ್ಕೆ ಕಿವಿ ಮಾತು ಹೇಳುತ್ತವೆ, ನಮ್ಮ ಮನೆಯಲ್ಲಿ ನಾವು ಸುಮ್ಮನೆ ಕೂಡದೆ ಕರೋನಾ ತಡೆಯುವದರಲ್ಲಿ ಸಹಕರಿಸದೆ ದೇಶದಲ್ಲಿ ರೋಗ ಹರಡಿದ್ದರ ಬಗ್ಗೆ ವ್ಯಂಗ ಮಾಡುತ್ತ ನಮ್ಮ ಸಾಮಾಜಿಕ ಜವಾಬ್ದಾರಿಗಳನ್ನ ಮರೆತಿದ್ದೇವೆ.
ವಿವೇಕಾನಂದರು ಹೇಳಿದ ಮಾತು ನೆನಪಾಯಿತು ... “ ನಿನ್ನನ್ನು ನೀನು ಸುಧಾರಿಸಿಕೋ, ಜಗತ್ತಿನಲ್ಲಿ ಒಬ್ಬ ಮೂರ್ಖ ಕಡಿಮೆಯಾಗುತ್ತಾನೆ... ಎಂದು ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಕರೋನಾ ನಿಯಮ ಪಾಲಿಸುವದರೋಂದಿಗೆ ಲಸೀಕೆಯನ್ನು ಹಾಕಿಸಿಕೊಂಡು ಪ್ರಭುದ್ಧ ಭಾರತದ ನಿರ್ಮಾಣವನ್ನು ಮಾಡುವ ಪಣವನ್ನು ಮಾಡೋಣ