ಕೊರೋನಾ ಭಯವಿಲ್ಲದೆ ಮೊದಲ ಪರೀಕ್ಷ ಬರೆದ ವಿದ್ಯಾರ್ಥಿಗಳು
- 15 Jan 2024 , 12:24 AM
- Belagavi
- 92
ಬೆಳಗಾವಿ: ಕೋವಿಡ್-19 ಆತಂಕ, ಬಿಗಿ ಭದ್ರತೆ ಮತ್ತು ಸುರಕ್ಷತೆಯ ನಡುವೆ ರಾಜ್ಯದಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆ ಆರಂಭವಾಗಿದೆ. ಕೊರೋನಾ ಭೀತಿಯ ನಡುವೆ ಇಷ್ಟು ದಿನ ಮುಂದೂಡಿಕೆಯಾಗಿದ್ದ ಎಸ್ಎಸ್ಎಲ್ ಸಿ ಪರೀಕ್ಷೆ ಕೊನೆಗೂ ಇಂದು ಆರಂಭವಾಗಿ ಮೊದಲ ಪರೀಕ್ಷೆ ಇಂದು ಮುಕ್ತಾಯ ವಾಗಿದೆ.
ಪರೀಕ್ಷಾ ಕೇಂದ್ರಗಳಲ್ಲಿ ಆಶಾ ಕಾರ್ಯಕರ್ತೆರು, ಆರೋಗ್ಯ ಸಿಬ್ಬಂದಿಗಳು ಸೇರಿ ಸ್ಕೌಟ್ ತಂಡದ ಸದಸ್ಯರು ಪ್ರತಿ ವಿದ್ಯಾರ್ಥಿಯನ್ನು ಥರ್ಮಲ್ ಸ್ಕ್ರೀನಿಂಗ್ ಮಾಡಿ ಮಾಸ್ಕ್ ಧರಿಸುವುದು, ಕೈಗೆ ಸ್ಯಾನಿಟೈಜರ್ ಹಾಕಿ ಕೈಗಳನ್ನ ಶುಚಿಯಗಿಟ್ಟುಕೊಳ್ಳುವ ಸ್ಕೌಟ್ ಸಿಬ್ಬಂದಿ ವಿದ್ಯಾರ್ಥಿಗಳನ್ನ ಅವರ ಆರೋಗ್ಯದ ದೃಷ್ಟಿಯಿಂದ ಕರೋನಾ ವಾರಿಯರ್ಸ್ ಆಗಿ ವಿದ್ಯಾರ್ಥಿಗಳ ಆರೋಗ್ಯ ಕಾಪಾಡುತ್ತಿದ್ದಾರೆ.
ಕೊರೋನಾ ಭಯವಿಲ್ಲದೆ ಮೊದಲ ಪರೀಕ್ಷೆ ಬರೆದಿದ್ದಾರೆ . ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಭಾರೀ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಮೊದಲ ಏಸ್ ಎಸ್ ಎಲ್ ಸಿ ಪರೀಕ್ಷೆಯನ್ನು ವಿದ್ಯಾರ್ಥಿಗಳು ಬಹಳ ಆತಂಕದಲ್ಲಿ ಹಾಗೂ ಉಸ್ತುಕದಲ್ಲಿ ಬರೆದಿದ್ದಾರೆ.