ಬೆಳಗಾವಿಯಲ್ಲಿ ಮತ್ತೆ ಸದ್ದು ಮಾಡಿದ ಎಸಿಬಿ
- 14 Jan 2024 , 9:27 PM
- Belagavi
- 97
ಬೆಳಗಾವಿ: ಕುಂದಾನಗರಿಯಲ್ಲಿ ಮತ್ತೆ ಎಸಿಬಿ ದಾಳಿ ನಡೆದಿದೆ ಕಳೆದ ಹತ್ತು ದಿನಗಳ ಹಿಂದೆ ಭ್ರಷ್ಟರಿಗೆ ಬಿಸಿ ಮುಟ್ಟಿಸಿದ್ದ ಎಸಿಬಿ ಇಂದು ಮತ್ತೆ ಬೆಳಗಾವಿಯಲ್ಲಿ ಎಸ್ಪಿ, ಬಿ.ಎಸ್.ನೇಮಿನಗೌಡರ ನೇತೃತ್ವದಲ್ಲಿ ಎಸಿಬಿ ದಾಳಿ ನಡೆದಿದೆ. ಡಿ.ದೇವರಾಜ್ ಅರಸು ಹಿಂದುಳಿದ ವರ್ಗಗಳ ಕಚೇರಿ ಹಾಗೂ ಅಭಿವೃದ್ಧಿ ನಿಗಮ ನಿಯಮಿತ, ಮಹರ್ಷಿ ವಾಲ್ಮೀಕಿ ನಿಗಮ, ಮೌಲಾನ ಅಲ್ಪಸಂಖ್ಯಾತರ ನಿಗಮ, ಹಾಗೂ ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತ ಕಚೇರಿಗಳ ಮೇಲೆ ಏಕಾಏಕಿ ದಾಳಿ ಯಾಗಿದೆ . ಜೂನ 16 ಕ್ಕೆ ಬೆಳಗಾವಿಯಲ್ಲಿ ಎಸಿಬಿ ದಾಳಿ ನಡೆದು ಇನ್ನು ಹತ್ತು ದಿನಗಳಾಗಿಲ್ಲಾ ಮತ್ತೆ ನಗರದಲ್ಲಿ ಎಸಿಬಿ ಅಧಿಕಾರಿಗಳು ಭ್ರಷ್ಟಾಚಾರಿಗಳಿಗೆ ಇಂದು ಬಿಸಿ ಮುಟ್ಟಿಸಿದ್ದಾರೆ. ಅನೇಕ ಪಲಾನುಭವಿಗಳಿಂದ ವಿವಿಧ ಯೋಜನೆಗಳಲ್ಲಿ ಸಿಗಬೇಕಾದ ಹಣ ಇನ್ನು ಮಂಜೂರು ಮಾಡಿಲ್ಲಾ ಸರ್ಕಾರ ದಿಂದ ಹಲವು ಯೋಜನೆಗಳು ಜಾರಿ ಯಾಗಿದ್ದರು ಪಲಾನುಭವಿಗಳಿಗೆ ಇನ್ನೂ ಸಿಕ್ಕಿಲ್ಲ ನಗರದ ಪ್ರಮುಖ ಹಿಂದುಳಿದ ಕಲ್ಯಾಣ ಇಲಾಖೆಗಳಲ್ಲಿ ಭ್ರಷ್ಟಾಚಾರ ನಡೆದಿದೆ ದೂರ ಕೇಳಿ ಬಂದ ಹಿನ್ನೆಲೆ ಇಂದು ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.