ಇತ್ತೀಚೆಗೆ ಪತ್ರಿಕೆಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ, ತಾವು ಮಾಡುವ ಸಣ್ಣ ಸಣ್ಣ ಸೇವೆಗಳನ್ನೂ ತೋರ್ಪಡಿಸಿಕೊಳ್ಳುವ ಸಮೂಹ ಸನ್ನಿ( ಸೆಲ್ಫಿ ತೆಗೆದುಕೊಳ್ಳು ವ ಸನ್ನಿ ತರಹ) ಆರಂಭವಾಗಿದೆಯೇ ಎನ್ನುವ ಅನುಮಾನ ನನ್ನನ್ನು ಕಾಡುತ್ತಿದೆ.
ಇದಕ್ಕೆ ಕಾರಣ ಇಲ್ಲದಿಲ್ಲ. ಪ್ರತಿ ದಿನ ವಾಟ್ಯಾಪ್ ಪುಟ ತೆರೆದರೆ ಕೊರೋನಾ ವಾರಿಯರ್ಸ್ಗೆ ಊಟದ ಪಾಕೆಟ್ಗಳ ಹಂಚಿಕೆ, ವಯೋವೃದ್ಧರಿಗೆ ಔಷಧಿ ಹಂಚಿಕೆ, ಪೋಲೀಸಪೇದೆ ಯೊಬ್ಬ, ತನ್ನ ಉಳಿತಾಯದ ಹಣದಲ್ಲಿ ಕೊರೋನಾ ರೋಗಿಯೊಬ್ಬರ ಆಸ್ಪತ್ರೆ ಬಿಲ್ ಕಟ್ಟಿದ ,ಮತ್ತೊಬ್ಬರು ಅವರ ಹೊಲದಲ್ಲಿ ಬೆಳೆದ ಹೆಚ್ಚುವರಿ ತರಕಾರಿ ಹಂಚಿದರು, ಹೀಗೆ ಸೇವೆಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
ನಾಗರೀಕ ಸೇವೆಯಲ್ಲಿರುವ ಅಧಿಕಾರಿಯೊಬ್ಬ ಸಮಯೋಚಿತ ವಾಗಿ ಅವನ ಕರ್ತವ್ಯ ನಿರ್ವಹಿಸಿದ ರೆ (ಉದಾ ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಕೆ) ಇದಕ್ಕೂ ಸಹ ಅವರೇ ಹಿರೋ ಎನ್ನುವಂತೆ ಫೊಟೋ ಕ್ಲಿಕ್ಕಿಸಿ ಕೊಂಡು ಸುದ್ದಿಯಾಗುವುದು, ಸುದ್ದಿ ಯಾಗದಿದ್ದರೆ ಮಾಡಿಸುವುದು, ಇದೆಲ್ಲ ಯಾವ ಮತ್ತು ಯಾರ ಪುರುಷಾರ್ಥ ಕ್ಕಾಗಿ ಮಾಡಬೇಕು ಎನ್ನುವುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳುವುದು ಇಂದಿನ ಅಗತ್ಯತೆ, ಎ೦ದು ನಾನು ಭಾವಿಸುತ್ತೇನೆ.
ಸೇವಾ ಮನೋಭಾವನೆಯಿಂದ ಲೇ ನಾವು ಈ ಕೆಲಸ ಮಾಡಿದ್ದೇವೆ ಎಂದು ಇಟ್ಟುಕೊಳ್ಳೊಣ. ಆದರೆ ನಮ್ಮಿಂದ ಸೇವೆ ಪಡೆದು ಕೊಳ್ಳುವ ವ ಅನುಭವಿಸುವ ಮುಜುಗರ ಹಾಗೂ ಕೀಳರಿಯನ್ನು ನಾವೇಕೆ ಅರ್ಥ ಮಾಡಿಕೊಳ್ಳುತ್ತಿಲ್ಲ.
ಸೇವೆ ಪಡೆದುಕೊಳ್ಳುವವನ ಜೊತೆ ನಾವು ಕ್ಲಿಕ್ಕಿಸಿಕೊಳ್ಳುವ ಒಂದು ಪೊಟೋ ನೆನಪಿಗಾಗಿ ನಮ್ಮ ಬಳಿ ಇಟ್ಟುಕೊಂಡ ರೆ ತಪ್ಪಲ್ಲ. ಆದರೆ ಆ ಫೋಟೋವನ್ನ ಜಾಹಿರಾತಿಗೆ ಹಾಗೂ ಸುದ್ದಿಯಾಗಲು ಬಳಸಿಕೊಂಡರೆ ತಪ್ಪಲ್ಲವೇ?
ಇಷ್ಠಕ್ಕೂ ಸಣ್ಣ ಸಣ್ಣ ವಿಚಾರಗಳ ಗಳಿಗೂ ಸದಾ ಸುದ್ದಿಯಲ್ಲಿರಬೇಕೆಂಬ ಹಪಹಪಿತನ ನಮಗೇಕೆ ? ರಾಜಕಾರ ಣಿಗಿರಬೇಕಾದ ಈ ಗುಣ ಸಾರ್ವಜನಿ ಕ ಸೇವೆಯಲ್ಲಿರುವ ಅಧಿಕಾರಿಗಳಿಗೆ ವಿಹಿತವೇ? ಈ ಸೇವಾ ಸನ್ನಿಯಿಂದ ಹೊರಬರಲು ಸಾಧ್ಯವಿಲ್ಲವೇ ಎನ್ನುವ ಪ್ರಶ್ನೆ ,ಪ್ರತಿಯೊಬ್ಬ ನಾಗರಿಕರಲ್ಲೂ ಹುಟ್ಟಿಕೊಂಡು, ಅದರಿಂದ ಹೊರ ಬರುವ ಪ್ರಯತ್ನ ಮಾಡ್ಬೇಕು.
ಇದನ್ನೆ ನಾವು ಸಮೂಹ ಪ್ರಜ್ಞೆಯ ತುಡಿತ ಎ೦ದು ಕರೆದುಕೊಳ್ಳೊಣ, ಹಾಗೂ ಇದನ್ನು ಎಲ್ಲಾ ವರ್ಗದ ನಾಗರೀಕರೂ ಪಾಲಿಸುವ ಮೂಲಕ ಸಮೂಹ ಪ್ರಜ್ಞೆ ಬೆಳೆಸಿಕೊಳ್ಳೊಣ, ಹಾಗೂ ಸಮೂಹದಲ್ಲಿ, ಹಾಗೂ ಸಮುದಾ ಯಲ್ಲಿ ಬೆಳೆಸುವ ಹೊಣೆಗಾರಿಕೆ ಯನ್ನು ನಾವೆಲ್ಲರೂ ಒಟ್ಟಾಗಿ ಹೊರೋಣವೇ?
ಸುದ್ದಿಗಾಗಿ ಸೇವೆ ಮಾಡಬೇಡಿ ಸೇವೆ ಮಾಡಿ ಸುದ್ದಿಯಾಗಲೂ ಬೇಡಿ ಸರಿದಿಲ್ಲದೆ ಸೇವೆ ಮಾಡಿ ಅದರಲ್ಲಿ ಸಾರ್ಥಕತೆಯನ್ನು ಕಂಡುಕೊಳ್ಳಿ ಎನ್ನುವ ಮದರ್ ಥೆರೆಸಾರವರ ನಲ್ನುಡಿಯನ್ನು ನಾವು ನೀವೆಲ್ಲರೂ ಪಾಲಿಸೋಣವೆ?