ಬೆಳಗಾವಿಕೊರೋನಾ ಸೋಂಕು ನಿಯಂತ್ರಣ ತರಲು ಸರಕಾರ ಬೆಳಗಾವಿ ಸೇರಿದಂತೆ 11 ಜಿಲ್ಲೆಗಳಲ್ಲಿ ಕಠಿಣ ಲಾಕ್ ಡೌನ್ ಘೋಷಣೆ ಮಾಡಿದ್ದರೂ ಬೆಳಗಾವಿಯಲ್ಲಿ ಮಾತ್ರ ಜನರು ಇದಕ್ಕೂ ನಮಗೂ ಸಂಬಂದ ಇಲ್ಲದ ರೀತಿ ವರ್ತಿಸುತ್ತಿದ್ದಾರೆ.
ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಲಾಕ್ ಡೌನ್ ಘೋಷಣೆ ಮಾಡಿ ಆದೇಶ ಹೊರಡಿಸಿದ್ದರು. ಇದರ ಪರಿಣಾಮ ಸೋಮವಾರ ಅಗತ್ತ ವಸ್ತುಗಳ ಖರೀದಿಗೆ ಮುಗಿ ಬಿದ್ದ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ವ್ಯಾಪಾರ ವಹಿವಾಟು ನಡೆಸಿದರು.
ಇತ್ತ ಬೆಳಗಾವಿ ನಗರದ ಕ್ಯಾಂಪ್ ಪೊಲೀಸ್ ಠಾಣೆಯ ಸಿಪಿಐ ನೇತೃತ್ವದಲ್ಲಿ ನಗರದ ಚನ್ನಮ್ಮ ವೃತ್ತದ ಗಣಪತಿ ಮಂದಿರದ ಹಿಂಬದಿಯಲ್ಲಿ ವಾಹನ ಸವಾರರನ್ನು ತಡೆದು ಕಟ್ಟು ನಿಟ್ಟಿನ ತಪಾಸಣೆ ನಡಿಸಿ ಲಾಕ್ ಡೌನ್ ಬಿಸಿ ಮುಟ್ಟಿಸಿದರು. ಉಳಿದ ಕಡೆಯಲ್ಲಿ ಟ್ರಾಫೀಕ್ ಜಾಮ್ ಆಗಿ ಜನರು ಕೊರೋನಾ ಮರೆತು ಜಾತ್ರೆ ನಡೆಸಿದರು.