ಗೋಕಾಕ: ತಾಲೂಕಿನ ಸಾವಳಗಿ ಗ್ರಾಮದಲ್ಲಿ "ಚಿನ್ನರ ಅಂಗಳ" ಖಾಸಗಿ ವಸತಿ ನಿಲಯಕ್ಕೆ ಯುವ ಮುಖಂಡರಾದ ರಾಹುಲ್ ಜಾರಕಿಹೊಳಿ ಅವರು ಇಂದು ಭೇಟಿ ನೀಡಿ, 35 ಮಕ್ಕಳಿಗೆ ರೇಷನ ಕಿಟ್, ಸ್ಯಾನಿಟೈಸರ್ ಹಾಗೂ ಮಾಸ್ಕ್ ಗಳನ್ನು ವಿತರಿಸಿದರು.
ನಂತರ ಮಾತನಾಡಿದ ಅವರು, "ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ" ಮೇಲ್ವಿಚಾರಕರಿಗೆ ಹೇಳಿದರು. ಈ ಸಮಾಜಮುಖಿ ಕಾರ್ಯಕ್ಕೆ ಗ್ರಾಮಸ್ಥರು ಹಾಗೂ ಮಕ್ಕಳು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಬಸವರಾಜ ಸಾಯನ್ನವರ, ಮಾರುತಿ ಗುಟಗುದ್ದಿ, ಎ.ಬಿ. ಖಾಜಿ, ಶ್ರೀಮತಿ ಮಂಜುಳಾ ರಂಗಾನಟ್ಟಿ, ಹಾಗೂ ವಸತಿ ನಿಲಯದ ಮೇಲ್ವಿಚಾರಕ ಚಂದ್ರಕಾಂತ್ ಐಹೊಳೆ, ಸುಮನ ಐಹೊಳೆ, ಮಲ್ಲಪ್ಪ ಗೋಕಾಕ, ಮಹ್ಮದ ಭಾಗಿ, ಶಿವಲಿಂಗ ಕೊಟಬಾಗಿ, ಬಸವರಾಜ ಹುಳ್ಳೊಳಿ ಸೇರಿ ಇನ್ನಿತರರು ಉಪಸ್ಥಿತರಿದ್ದರು.
ಪ್ರತಿಯೊಬ್ಬರು ಲಸಿಕೆ ಪಡೆಯಿರಿ:
ರೇಷನ್ ಕಿಟ್ ವಿತರಣೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಜಾರಕಿಹೊಳಿ ಅವರು, "ಬಡ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಸತಿ ನಿಲಯಕ್ಕೆ ರೇಷನ್ ಕಿಟ್ ವಿತರಿಸಲಾಗಿದೆ" ಎಂದು ತಿಳಿಸಿದರು.
"ಕೊರೊನಾ ಮೂರನೇ ಅಲೆಯ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಲಸಿಕೆ ಪಡೆಯಬೇಕು. ಸರ್ಕಾರ ಕೂಡ ಶೀಘ್ರವಾಗಿ ಎಲ್ಲರಿಗೂ ಲಸಿಕೆ ಕೊಡಿಸುವ ಕೆಲಸ ಮಾಡಬೇಕು. ಎಲ್ಲರೂ ಒಗ್ಗಟ್ಟಾಗಿ ಮೂರನೇ ಅಲೆಯ ವಿರುದ್ಧ ಹೋರಾಟ ಮಾಡಬೇಕು" ಎಂದು ಅವರು ಹೇಳಿದರು.
ಹಿಂದಿನ ವರ್ಷ ಕೋವಿಡ್ ಸಂದರ್ಭದಲ್ಲೂ ತಂದೆಯವರಾದ ಸತೀಶ ಜಾರಕಿಹೊಳಿಯವರ ಮಾರ್ಗದರ್ಶನದಲ್ಲಿ ನಾವು ಅನೇಕರಿಗೆ ಸ್ಯಾನಿಟೈಸರ್, ಮಾಸ್ಕ್ ಹಾಗೂ ಆಹಾರ ಕಿಟ್ ಗಳನ್ನು ವಿತರಿಸಿದ್ದೇವೆ. ಈ ವರ್ಷವೂ ಕೂಡ ಸಾವಿರಾರು ಜನರಿಗೆ ಮಾಸ್ಕ್, ಸ್ಯಾನಿಟೈಸರ್ ಹಾಗೂ ಆಹಾರ ಕಿಟ್ ವಿತರಣೆ ಮಾಡಿದ್ದೇವೆ. ನಮ್ಮ ಸಮಾಜಮುಖಿ ಕಾರ್ಯ ಹೀಗೆಯೇ ಮುಂದುವರೆಯಲಿದೆ" ಎಂದು ರಾಹುಲ್ ತಿಳಿಸಿದರು.