ಲಡಾಖ್: ಗಡಿಯಲ್ಲಿ ಚೀನಾದ ವಾಯುಸೇನೆಗೆ ಸೇರಿದ ಯುದ್ಧ ವಿಮಾನಗಳು ಹಾಗೂ ಹೆಲಿಕಾಪ್ಟರ್‌ಗಳು ಹಾರಾಟ ನಡೆಸುತ್ತಿದ್ದು, ಗಲ್ವಾನ್ ನದಿ ಪಾತ್ರದಲ್ಲಿ ಸೇನಾ ಟೆಂಟ್ ಹಾಕಿಕೊಂಡಿರುವುದು ಸ್ಪಷ್ಟವಾಗಿದೆ.
ಚೀನಾ ಸೇನೆಯ ಟೆಂಟ್‌ಗಳು ಕಾಣಿಸಿಕೊಂಡಿದ್ದು, ಉಪಗ್ರಹದಮೂಲಕ ಸೆರೆಹಿಡಿಯಲಾದ ಚಿತ್ರಗಳಲ್ಲಿ ಕಪ್ಪು ಟಾರ್ಪಲಿನ್ ಹೊದಿಸಿರುವ 16 ಸೇನಾ ಟೆಂಟ್‌ಗಳು ಕಾಣಿಸಿಕೊಂಡಿವೆ.
ಈಗಾಗಲೇ ಗಡಿ ಸಮಸ್ಯೆ ಕುರಿತು ಉಭಯ ಸೇನೆಗಳ ನಡುವೆ ಮಿಲಿಟರಿ ಮಾತುಕತೆಗಳು ನಡೆದಿವೆ. ಆದರೆ ಮಾತುಕತೆ ಸಂದರ್ಭದಲ್ಲಿ ಸೇನೆಯನ್ನು ಹಿಂಪಡೆಯುವ ಕುರಿತು ಭರವಸೆ ನೀಡುವ ಚೀನಾ ಅಧಿಕಾರಿಗಳು, ಮಾತುಕತೆ ಬಳಿಕ ಮತ್ತೆ ಸೈನ್ಯ ಜಮಾವಣೆ ಮಾಡಿದೆ ಒಟ್ಟಿನಲ್ಲಿ ಭಾರತ ಚೀನಾ ನಡುವೆ ನಡೆದ ಮಿಲಿಟರಿ ಒಪ್ಪಂದ ಗಾಳಿಗೆ ತುರಿದ ಚೀನಾ.
ಚೀನಿ ಸೇನೆಯ ಈ ನಂಬಿಕೆ ದ್ರೋಹಕ್ಕೆ ತಿರುಗೇಟು ನೀಡಲು ಭಾರತ ಕೂಡ ಸಜ್ಜಾಗಿದ್ದು, ಲಡಾಖ್ ಗಡಿಗೆ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯನ್ನು ನಿಯೋಜಿಸುವ ಮೂಲಕ ಎಚ್ಚರಿಕೆಯ ಸಂದೇಶ ರವಾನಿಸಿದೆ.