ಜೀವ ಸಂಕುಲ ಉಳಿಯಬೇಕಾದರೆ ಪ್ರತಿಯೊಬ್ಬರೂ ಸಸಿ ನೆಟ್ಟು ಬೆಳಿಸಿ ಪೋಷಿಸುವ ಸಂಕಲ್ಪ ಮಾಡಲು ಡಾ.ಎಚ್.ಡಿ.ಕೊಳೆಕರ ಕರೆ

  • 30 Dec 2023 , 11:59 AM
  • Belagavi
  • 136

ಬೈಲಹೊಂಗಲ: ಭೂಮಿಯ ಮೇಲೆ ಸ್ವಸ್ಥ ಆರೋಗ್ಯದಿಂದ ಜೀವ ಸಂಕುಲ ಉಳಿಯಬೇಕಾದರೆ ಪ್ರತಿಯೊಬ್ಬರೂ ಸಸಿ ನೆಟ್ಟು ಬೆಳಿಸಿ ಪೋಷಿಸುವ ಅನಿವಾರ್ಯತೆ ಇದೆ ಎಂದು ಬೆಳಗಾವಿ ಜಿಲ್ಲಾ ಉಪ ಕೃಷಿ ನಿರ್ದೇಶಕ ಡಾ.ಎಚ್.ಡಿ.ಕೊಳೆಕರ ಹೇಳಿದರು. ಸಮೀಪದ ಮರಕುಂಬಿ ಗ್ರಾಮದ ಪವಾಡ ಬಸಪ್ಪ ದೇವಸ್ಥಾನದ ಆವರಣದಲ್ಲಿ ಚಾಮುಂಡೇಶ್ವರಿ ಆತ್ಮಾ ಸಂಘದ ಅಡಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆ ಪ್ರಯುಕ್ತ ಸಸಿ ನೆಟ್ಟು ಮಾತನಾಡಿ,

ಕೊವಿಡ್ ಸಂದರ್ಭದಲ್ಲಿ ಆಮ್ಲಜನಕದ ಮಹತ್ವ ಪ್ರತಿಯೊಬ್ಬರಿಗೂ ಅರಿವಾಗಿದ್ದು ವಾತಾವರಣದಲ್ಲಿ ಶುದ್ದ ಆಮ್ಲಜನಕದ ಉತ್ಪಾದನೆಗೆ ರೈತರು ಕೃಷಿ ಅರಣ್ಯ ಕೈಗೊಳ್ಳಬೇಕು. ಬದುಗಳಲ್ಲಿ ಕೃಷಿ ಉಪಯುಕ್ತ ಸಸಿಗಳನ್ನು ನೆಟ್ಟು ಬೆಳೆಸಬಹುದು ಎಂದರು. ರೈತರಿಗೆ ಕೃಷಿ ಬೆಳೆಗಳ ಬಗ್ಗೆ ಕೃಷಿ ಅಧಿಕಾರಿಗಳು ಮಾಹಿತಿ ನೀಡುತ್ತಿದ್ದು ಇದರ ಸದ್ಬಳಿಕೆ ಮಾಡಿಕೊಳ್ಳಬೇಕು. ಬೀಜ, ಗೊಬ್ಬರ ಹಾಗೂ ಕೀಟನಾಶಕ ವ್ಯಾಪಾರಗಾರರಿಂದ ತೊಂದರೆಯಾದರೆ ನಮಗೆ ತಿಳಿಸಿ ತಕ್ಷಣ ಕ್ಮ ಕೈಗೊಳ್ಳುತ್ತೆವೆ. ಈಗಾಗಲೆ ಅಧಿಕಾರ ವರ್ಗ ಈ ನಿಟ್ಟಿನಲ್ಲಿ ಕಾರ್ಯ ಪ್ರವರ್ತರಾಗಿದ್ದಾರೆ ಎಂದರು.

ಮತ್ತಿಕೊಪ್ಪ ಕೆವಿಕೆ ವಿಜ್ಞಾನಿ ಡಾ.ಎಸ್.ಎಸ್.ಹಿರೇಮಠ ಮಾತನಾಡಿ, ಮುಂಗಾರು ಮಳೆ ಉತ್ತಮ‌ವಾಗಿ ಪ್ರಾರಂಭವಾಗಿದ್ದು ರೈತರು ಬಿತ್ತನೆಗೆ ಗುಣಮಟ್ಟದ ಬೀಜ ಬಳಸಿ ಅವುಗಳನ್ನು ಉಪಚರಿಸಿ ಬಿತ್ತನೆ ಮಾಡಬೇಕು. ಸೋಯಾಅವರೆ ಮತ್ತು ಹೆಸರು ಬೇಳೆಗಳ ಬಿತ್ತನೆಯಾಗಿದ್ದು ಹಳದಿ ನಂಜಿನ ರೋಗ ಕಾಣಿಸಿಕೊಳ್ಳುತ್ತಿದೆ. ಇದಕ್ಕಾಗಿ ರೈತರು ಪ್ರತಿ ಲೀಟರ್ ನೀರಿಗೆ ಥೈಯೊಮಿಥಾಕ್ಸೈಮ್ ೦.3ಗ್ರಾಂ ಮ್ಯಾಗ್ನೇಸಿಯಂ ಸಲ್ಪೇಟ್ 5ಗ್ರಾಂ ಮತ್ತು ಬೇವಿನ ಕಷಾಯಿ ಬಳಸಿ ಬೆಳೆಗಳಿಗೆ ಸಿಂಪರಣೆ ಮಾಡುವ ಮೂಲಕ ಈ ನಂಜು ರೋಗ ತಡೆಯಬಹುದಾಗಿದೆ ಎಂದರು. ಹೊಸೂರ ಎಪಿಎಂಸಿ ನಿರ್ದೇಶಕ ಎಫ್.ಎಸ್.ಸಿದ್ದನಗೌಡರ ಮಾತನಾಡಿ,ಜಿಲ್ಲಾ ಮಟ್ಟದ ಕೃಷಿ ಅಧಿಕಾರಿಗಳು ಗ್ರಾಮೀಣ ಕ್ಷೇತ್ರಗಳ ಪರಿಶೀಲನೆಗೆ ಬರುವ ಪರಂಪರೆ ಕೃಷಿ ಕ್ಷೇತ್ರ ಬೆಳೆಯಲು ಮತ್ತು ರೈತರಲ್ಲಿ ಕೃಷಿಯ ಬಗ್ಗೆ ಇರುವ ಆಸಕ್ತಿ ಹೆಚ್ಚುತ್ತದೆ.

ಸರ್ಕಾರ ಕೃಷಿ ಇಲಾಖೆಗೆ ಸಾಕಷ್ಟು ಅನುದಾನ ನೀಡುತ್ತಿದೆ ಇದರಲ್ಲಿ ರೈತರಿಗೆ ಉತ್ತಮ ಗುಣಮಟ್ಟದ ಕೃಷಿ ಉಪಕರಣಗಳನ್ನು ಮತ್ತು ಅವಶ್ಯಕ ಕೀಟನಾಶಕಗಳನ್ನು ಪೊರೈಸಬೇಕು. ಸದ್ಯದ ಸ್ಥಿತಿಯಲ್ಲಿ ಕೆಲ ಒಂದಿಷ್ಟು ಕಿಟನಾಶಕಗಳ ಗುಣಮಟ್ಟ ಸರಿಇಲ್ಲ ಎಂದು ಅಧಿಕಾರಿಗಳ ಗಮನ ಸೆಳೆದರು. ಗ್ರಾಮದ ಯುವ ರೈತ ನವೀನ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯ ಮೇಲೆ ಮೂರಗೋಡ ರೈತ ಸಂಪರ್ಕದ ಕೃಷಿ ಅಧಿಕಾರಿ ನಾಗೇಶ ವಿರಕ್ತಮಠ, ಯಮನಪ್ಪ ಮಾದರ, ಆತ್ಮ ಸಂಘದ ಮುಖ್ಯಸ್ಥ ರವಿ ಕುರಬೆಟ್ಟ ಇದ್ದರು. ಕಾರ್ಯಕ್ರಮದಲ್ಲಿ ಎಮ್.ಡಿ.ಸಾಲಹಳ್ಳಿ, ರೈತರಾದ ಮಹಾಂತೇಶ ಕೌಜಲಗಿ,ಮಂಜು ಮೇಟಿ,ನಿರ್ಘೂನ ರೆವಣ್ಣವರ ಮುಂತಾದವರು ಇದ್ದರು.

ಹಳದಿ ನಂಜಿನ ರೋಗದ ಬಾದೆಗ್ರಸ್ಥ ಹಳ್ಳಿಗಳಿಗಳ ಅನೇಕ‌ ರೈತರ ಜಮೀನುಗಳಿಗೆ ಬೆಟ್ಟಿ ನೀಡಿದ ಕೃಷಿ ಅಧಿಕಾರಿಗಳ ತಂಡ ರೈತರಿಗೆ ರೋಗ ನಿಗ್ರಹಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸಿದರು

Read All News