ಬೆಳಗಾವಿ: ಕರ್ನಾಟಕ ಸಾಂಕ್ರಾಮಿಕ ರೋಗ ತಡೆ ಕಾಯ್ದೆ 2020 ನೇದ್ದರ ಅಡಿಯಲ್ಲಿ ಅನಾವಶ್ಯಕವಾಗಿ ಸಂಚರಿಸುತ್ತಿದ್ದ 26 ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಇನ್ನೂ ಹೊಸೂರು ಬಸವನ ಗಲ್ಲಿಯ ಹೊಟೇಲ್ ಮಲ್ಹಾರ ದಲ್ಲಿ ಅವಧಿ ಮೀರಿ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಒಂದೇ ಕಡೆ ಕೂಡ್ರಿಸಿ ಊಟ ನೀಡುತ್ತಿದ್ದ ಹೊಟೇಲ ಮಾಲೀಕನಾದ ಶ್ರೀಧರ್ ಶಂಕರ್ ಪಾಟೀಲ ಹಾಗೂ ಇತರೆ 17 ಜನರ ವಿರುದ್ದ ಶಹಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.