ತಂದೆ ಪುಣ್ಯ ತಿಥಿಗೆ ಬಂದ ಮಗಳಿಗೆ ಕೊರೋನಾ ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮದ ಹಿರೇಮಠ ಗಲ್ಲಿ ಸೀಲ್ ಡೌನ್

  • 15 Jan 2024 , 12:30 AM
  • Belagavi
  • 108

ಬೆಳಗಾವಿ: ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮದ ಹಿರೇಮಠ ಗಲ್ಲಿಯನ್ನು ಸಿಲ್ ಡೌನ ಮಾಡಲಾಗಿದೆ ಗ್ರಾಮದಲ್ಲಿ ಇಬ್ಬರಿಗೆ ಕೊರೋನಾ ಸೋಂಕು ತಗುಲಿರುವದು ಖಚಿತವಾಗಿದೆ‌ . ಮಹಾರಾಷ್ಟ್ರದಿಂದ ಮಹಿಳೆ ಒಬ್ಬಳು ತನ್ನ ತಂದೆಯ ಪುಣ್ಯ ತಿಥಿ ಗೆ ಬಂದಿದ್ದರಿಂದ ಕೊರೋನಾ ಸೋಂಕು ತಗುಲಿದೆ ಇದರಿಂದ ಇಡೀ ಗ್ರಾಮಕ್ಕೆ ಗ್ರಾಮವೇ ಕೊರೋನಾ ಮಾಹಾಮಾರಿಯಿಂದ ಆತಂಕ ಸೃಷ್ಟಿಯಾಗಿದೆ. ಒಂದೇ ಕುಟುಂಬದ ತಾಯಿ ಹಾಗೂ ಮಗಳಿಗೆ ಸೋಂಕು ತಗುಲಿದೆ  25 ವರ್ಷದ  ಹಾಗೂ 45 ವರ್ಷದ ಮಹಿಳೆಯರಿಗೆ   ಕೊರೋನಾ ಸೋಂಕು ತಗುಲಿರುವದು ದೃಢಪಟ್ಟಿದ್ದು ಅವರ ಮಗನಿಗೆ ಕೊರೋನಾ ನೆಗೆಟಿವ್ ಬಂದಿದೆ ಸಂಪೂರ್ಣ ಕುಟುಂಬವನ್ನು ತಪಾಸಣೆ ಮಾಡಲಾಗಿದೆ.

ಗ್ರಾಮದಲ್ಲಿ ಕಂಟೋನ್ಮೆಂಟ್ ಝೋನ್ ಸ್ಥಾಪಿಸಲಾಗಿದೆ. 58ಜನರನ್ನುಕ್ವಾರಂಟೈನ ಮಾಡಲಾಗಿದೆ ಆದರೆ ಇನ್ನೂ ಗ್ರಾಮದಲ್ಲಿ ಕೊರೋನಾ ಸೋಂಕಿತರ ಸಂಖ್ಯೆಯಲ್ಕಿ ಹೆಚ್ಚಳವಾಗ ಬಹುದಾಗಿದೆ . ಹಿರೇಮಠಗಲ್ಲಿ ಸಿಲ್ ಡೌನ್ ಮಾಡಲಾಗಿದೆ ಆದರೆ ಬೆಳಗಾವಿಗೆ ಮಹಾರಾಷ್ಟ್ರ ನಂಜು ಅಂತು ಇನ್ನು ಬಿಟ್ಟಿಲ್ಲ.

Read All News