ಅಥಣಿ: ದಯವಿಲ್ಲದ ಧರ್ಮವಾವುದಯ್ಯಾ..?
ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ..!
ದಯವೇ ಧರ್ಮದ ಮೂಲವಯ್ಯಾ..!
ಜಾತಿ,ಮತ,ಪಂಥ ಭೇದವಿಲ್ಲದೆ ಸರ್ವ ಧರ್ಮ ಸಮಾನತೆ ಸಾರುವ ವಿಶ್ವಗುರು ಬಸವಣ್ಣನವರ ತಪೋಭೂಮಿ ಐಕ್ಯಕ್ಷೇತ್ರ ಕೂಡಲಸಂಗಮದಲ್ಲಿಲಿಂಗಾಯತ ಧರ್ಮಿಯರ ವಾರ್ಷಿಕ ಪವಿತ್ರ ಸಮಾವೇಶ 2023 ಜನವರಿ ದಿ - 12-13-14ರಂದು ಶರಣುಮೇಳ ಕಾರ್ಯಕ್ರಮ ಜರುಗುವುದು.
ಈ ಕಾರ್ಯಕ್ರಮದ ಪ್ರಯುಕ್ತ ಶರಣುಮೇಳ ಸಮಿತಿಯ ಕಾರ್ಯದ್ಯಕ್ಷಿ ಪರಮಾಪೂಜ್ಯ ಶ್ರೀಮನ್ನಿರಂಜನ್ ಮಹಾಜಗದ್ಗುರು ಡಾ. ಮಾತೇ ಗಂಗಾದೇವಿಯವರು, ಮಾತೆ ಬಸವರತ್ನ ಮಾತಾಜಿ ಸುಕ್ಷೇತ್ರ ಕೂಡಲಸಂಗಮ ಶರಣುಮೇಳ ಸಮಿತಿ ತಂಡ ಪ್ರತಿ ಹಳ್ಳಿ ಹಳ್ಳಿಗೆ ತೆರಳಿ ಧರ್ಮ ಪ್ರಚಾರ ಹಾಗೂ ಬಸವೇಶ್ವರ ವೃತ್ತದ ಬಳಿ ಷಠಸ್ಥಲ ಧ್ವಜಾರೋಹಣ ನೆರವೇರಿಸಿ ಜಾಹಿರಾತು ನೀಡಿ ಶರಣುಮೇಳಕ್ಕೆ ಆಹ್ವಾನ ನೀಡುತ್ತಿದ್ದಾರೆ.
ಈ ಪ್ರಚಾರದ ಅಂಗವಾಗಿ ಇಂದು ಅಥಣಿ ತಾಲೂಕಿನ ತಾಂವಶಿ ಗ್ರಾಮದಲ್ಲಿ ಪ್ರಚಾರ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ತಾಂವಶಿ ಗ್ರಾಮದ ತಾಯಂದಿರು ಶರಣು ಬಂದುಗಳು ಬರುವಂತೆ ಆಮಂತ್ರಣ ನೀಡಿದರು.