ಬೆಳಗಾವಿ : ವಿನಾಯಕ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದ ಸುಮಾರು30ಕ್ಕೂ ಅಧಿಕ ಸಿಬ್ಬಂದಿಗಳಿಗೆ ಪೃಥ್ವಿ ಸಿಂಗ್ ಫೌಂಡೇಶನ್ ವತಿಯಿಂದ ಶನಿವಾರ ಆಹಾರದ ಕಿಟ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡೆ ಡಾ. ಸೋನಾಲಿ ಸರ್ನೋಬತ್, ವಿಲಾಸ ಪೈ, ಬೈರು ಪಾಟೀಲ, ರಾಜು ಗುರುಮಟ್ಟಿ, ಬಿಜೆಪಿ ಕಾರ್ಯಕಾರಣಿ ಸದಸ್ಯ ಪೃಥ್ವಿ ಸಿಂಗ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.