ಯುಪಿದುರ್ಬಲ ಆರ್ಥಿಕ ಸ್ಥಿತಿ ಮತ್ತು ವಿದ್ಯಾರ್ಥಿಗಳಿಗಾಗಿ ಉದ್ಯೋಗ ಮತ್ತು ವಿವಾಹದ ನೆಪದಲ್ಲಿ ಧಾರ್ಮಿಕ ಮತಾಂತರದಲ್ಲಿ ಭಾಗಿಯಾಗಿದ್ದಕ್ಕಾಗಿ ಇಬ್ಬರು ವ್ಯಕ್ತಿಗಳನ್ನು ಯುಪಿ ಎಟಿಎಸ ಬಂಧಿಸಿದೆ.
ಐಎಸ್ಐ ಸೇರಿದಂತೆ ಕೆಲವು ಅಂತರರಾಷ್ಟ್ರೀಯ ಸಂಸ್ಥೆಗಳಿಂದ ಆರೋಪಿಗಳಿಗೆ ಧನಸಹಾಯ ನೀಡಲಾಗುತಿತ್ತು ಎಂದು ತನಿಖೆ ಬಹಿರಂಗಪಡಿಸಿದೆ.
1000 ಕ್ಕೂ ಹೆಚ್ಚು ವ್ಯಕ್ತಿಗಳ ಧರ್ಮ ಮತಾಂತರದ ಆರೋಪದ ಮೇಲೆ ಯುಪಿ ಎಟಿಎಸ್ ಮುಫ್ತಿ ಖಾಜಿ ಜಹಾಂಗೀರ್ ಮತ್ತು ಮೊಹಮ್ಮದ್ ಉಮರ್ ಗೌತಮ್ ಅವರನ್ನು ಬಂಧಿಸಿದೆ. ಮೊಹಮ್ಮದ್ ಉಮರ್ ಗೌತಮ್ ಸ್ವತಃ ಮತಾಂತರಗೊಂಡವನು ಎಂದು ತಿಳಿದು ಬಂದಿದೆ.
ಮಕ್ಕಳು ಮತ್ತು ಯುವತಿಯರು ಸೇರಿದಂತೆ ಸಮಾಜದ ದುರ್ಬಲ ವರ್ಗದ 1000 ಮುಸ್ಲಿಮೇತರರನ್ನು ಮತಾಂತರಗೊಳಿಸಿ ಮುಸ್ಲಿಮರ ಜೊತೆ ಮದುವೆ ಮಾಡಿಸುತಿದ್ದರು ಎಂದು ತನಿಖೆಯವೇಳೆ ಬಹಿರಂಗವಾಗಿದೆ.