ದೇಶಾದ್ಯಂತ ವ್ಯಾಕ್ಸಿನೇಷನ್ ಕಾರ್ಯಕ್ರಮವನ್ನು ಪ್ರಾರಂಭಿಸಲು ಮತ್ತು ಕಾರ್ಯಗತಗೊಳಿಸಲು ಸಹಾಯ ಮಾಡಿದ ಡಿಜಿಟಲ್ ಪ್ಲಾಟ್‌ಫಾರ್ಮ್ ಕೋ-ವಿನ್‌ನ ಅಭಿವೃದ್ಧಿ ಕಥೆಯನ್ನು ಹಂಚಿಕೊಂಡಿದ್ದು 20 ಕ್ಕೂ ಹೆಚ್ಚು ದೇಶಗಳು ತಮ್ಮದೇ ಆದ ವ್ಯಾಕ್ಸಿನೇಷನ ಡ್ರೈವ್‌ಗಳನ್ನು ಚಲಾಯಿಸಲು ಕೋವಿನ ಪೋರ್ಟಲ್ ಅನ್ನು ಅಳವಡಿಸಿಕೊಳ್ಳಲು ಆಸಕ್ತಿ ತೋರಿಸಿವೆ.
ಕೇಂದ್ರ ಆರೋಗ್ಯ, ಬಾಹ್ಯ ವ್ಯವಹಾರಗಳು ಮತ್ತು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಜಂಟಿಯಲ್ಲಿ ಜೂನ್ 30 ರಂದು ವರ್ಚುವಲ್ ಕೋ-ವಿನ್ ಗ್ಲೋಬಲ್ ಸಮಾವೇಶ ಆಯೋಜಿಸಲಾಗುವುದು.
ವಿಯೆಟ್ನಾಂ, ಪೆರು, ಮೆಕ್ಸಿಕೊ, ಇರಾಕ್, ಡೊಮಿನಿಕನ್ ರಿಪಬ್ಲಿಕ್, ಪನಾಮ, ಉಕ್ರೇನ್, ನೈಜೀರಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಉಗಾಂಡಾ ಮತ್ತು ಹಲವಾರು ದೇಶಗಳು ತಮ್ಮದೇ ಆದ ಕೋವಿಡ್ ವ್ಯಾಕ್ಸಿನೇಷನ್ ಕಾರ್ಯಕ್ರಮಗಳನ್ನು ನಡೆಸಲು ಕೋ-ವಿನ್ ತಂತ್ರಜ್ಞಾನದ ಬಗ್ಗೆ ಕಲಿಯಲು ಆಸಕ್ತಿ ವ್ಯಕ್ತಪಡಿಸಿವೆ ಎಂದು ಮೂಲಗಳು ತಿಳಿಸಿವೆ.