ಜುಲೈ 1 ರಾಷ್ಟ್ರೀಯ ವೈದ್ಯರ ದಿನ ಏನಿದರ ವಿಶೇಷ ?

  • 15 Jan 2024 , 1:17 AM
  • Delhi
  • 94

ಜುಲೈ1 ಈ ದಿನ ವಿಶೇಷವೆಂದರೆ ಭಾರತದಲ್ಲಿ ರಾಷ್ಟ್ರೀಯ ವೈದ್ಯರ ದಿನವಾಗಿ ಆಚರಿಸಲಾಗುತ್ತದೆ. "ವೈದ್ಯೋ ನಾರಾಯಣೋ ಹರಿಃ" ಎಂದು ವೈದ್ಯರನ್ನು ಆ ಶ್ರೀಮನ್ನಾರಾಯಣನಿಗೆ ಹೋಲಿಸಲಾಗುತ್ತದೆ ಕಾರಣ ಜಗತ್ತಿನಲ್ಲಿ ನಡೆಯುವ ಕಷ್ಟ ದುಷ್ಟವನ್ನು ಆ ಭಗವಂತನು ಪರಿಹರಿಸಿದರೆ. ಮನುಷ್ಯನ ಅನಾರೋಗ್ಯವನ್ನು ಗುಣಪಡಿಸುವ ಸಾಮರ್ಥ್ಯ ಇರುವುದು ವೈದ್ಯರಲ್ಲಿಯೇ ರೋಗಿಯ ಸ್ಥಿತಿಯನ್ನು ಪರಿಶೀಲಿಸಿ ಅವರಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಿ ಅವರ ಪ್ರಾಣ ರಕ್ಷಣೆ ಮಾಡುತ್ತಾರೆ ಅದಕ್ಕಾಗಿ ವೈದ್ಯರನ್ನು ಆ ದೇವರಿಗೆ ಹೋಲಿಸಲಾಗಿದೆ.ಮನುಷ್ಯನ ಆರೋಗ್ಯ ಯಾವಾಗಲೂ ಉತ್ತಮ ಆರೋಗ್ಯದಿಂದಲೇ ಇರುವಂಥದ್ದಲ್ಲ ನಮ್ಮ ದೇಹ ಅಥವಾ ಶರೀರದಲ್ಲಿ ಹಲವಾರು ಕಾಯಿಲೆಗಳು ಆಗಾಗ ಆವರಿಸಿಕೊಳ್ಳುತ್ತಾನೆ ಇರುತ್ತವೆ. ಅಂತಹ ಬಾಧಿಸುವ ಕಾಯಿಲೆ, ರೋಗಗಳಿಂದ ಪ್ರಾಣವೇ ಹೋಗುವ ಸ್ಥಿತಿಯಲ್ಲಿ ಇರುತ್ತದೆ, ಅನಾರೋಗ್ಯದ ಸ್ಥಿತಿಯನ್ನು ಸರಿಪಡಿಸುವುದು ವೈದ್ಯರು. ಅವರ ನಿಷ್ಠೆ, ಶ್ರಮ, ಸೇವೆಗೆ ಬೆಲೆ ಕಟ್ಟಲಾಗುವುದಿಲ್ಲ ಅವರು ನಮ್ಮೆಲ್ಲರ ಆರೋಗ್ಯವನ್ನು ಸುಧಾರಿಸಿ ಮರುಜನ್ಮ ನೀಡುತ್ತಾರೆ ಅಂತಹ ಪ್ರತಿಯೊಬ್ಬ ವೈದ್ಯರಿಗೆ ಹಾಗೂ ವೈದ್ಯ ಸಮುದಾಯಕ್ಕೆ ಧನ್ಯವಾದಗಳನ್ನು ಸಮರ್ಪಿಸಲು ಈ ದಿನವನ್ನು (ಜುಲೈ1) "ರಾಷ್ಟ್ರೀಯ ವೈದ್ಯರ ದಿನ" ಎಂದು ಆಚರಿಸಲಾಗುತ್ತದೆ. 

docday

ರಾಷ್ಟ್ರೀಯ ವೈದ್ಯರ ದಿನದ ಇತಿಹಾಸ ಹಿರಿಯ ವೈದ್ಯ ಮತ್ತು ಪಶ್ಚಿಮ ಬಂಗಾಳದ ಎರಡನೆಯ ಮುಖ್ಯಮಂತ್ರಿಯಾಗಿದ್ದ ಡಾ. ಬಿಧಾನ್ ಚಂದ್ರ ರಾಯ್ ಅವರ ಸ್ಮರಣಾರ್ಥ ಜುಲೈ 1 ಈ ದಿನವನ್ನು ನಮ್ಮ ದೇಶದಲ್ಲಿ ರಾಷ್ಟ್ರೀಯ ವೈದ್ಯರ ದಿನ ಎಂದು ಆಚರಿಸಲಾಗುತ್ತದೆ. ಡಾ.ಬಿಧಾನ್ ಚಂದ್ರ ರಾಯ್ ಅವರು ಅತ್ಯಂತ ಗೌರವಾನ್ವಿತ ವೈದ್ಯ ಹಾಗೂ ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಇವರ ಪಶ್ಚಿಮ ಬಂಗಾಳದ ಎರಡನೆಯ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದರು. ಅವರು ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಹಳೆಯ ವಿದ್ಯಾರ್ಥಿಯಾಗಿದ್ದರು. ಅವರ ನೆನಪಿಗಾಗಿ ಕೇಂದ್ರ ಸರಕಾರವು ಒಂದು ಪ್ರಶಸ್ತಿಯನ್ನು ಸ್ಥಾಪಿಸಿತು. ಹಾಗೂ ಸುಮಾರು ಹದಿನಾಲ್ಕು ವರ್ಷಗಳ ಕಾಲ ವೈದ್ಯರಾಗಿ ಸೇವೆ ಸಲ್ಲಿಸಿದ್ದಾರೆ. 1928 ರಲ್ಲಿ ಅವರು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು.

docday

ಡಾ.ಬಿಧಾನ್ ಚಂದ್ರ ರಾಯ್ ಅವರು ಜುಲೈ 1, 1882 ಜನಿಸಿದರು ಮತ್ತು ಅದೇ ದಿನಾಂಕದಂದು ಜುಲೈ 1,1962 ರಲ್ಲಿ ನಿಧನರಾದರು. ಅವರಿಗೆ 1961 ಫೆಬ್ರವರಿ 4 ರಂದು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ "ಭಾರತರತ್ನ ಪ್ರಶಸ್ತಿ" ನೀಡಿ ಗೌರವಿಸಲಾಯಿತು. ಜಗತ್ತಿನಲ್ಲಿ ಮೊದಲ ಬಾರಿಗೆ ಅಂತರಾಷ್ಟ್ರೀಯ ವೈದ್ಯರ ದಿನವನ್ನಾಗಿ ಮೇ 9 1933ರಲ್ಲಿ ಯುಎಸ್ ನ ಜಾರ್ಜಿಯಾದಲ್ಲಿ ಆಚರಿಸಲಾಯಿತು. ಅದೇ ರೀತಿಯಾಗಿ ವೈದ್ಯರ ಮೌಲ್ಯವನ್ನು ತಿಳಿಸಲು ಹಾಗೂ ವೈದ್ಯಕೀಯ ವೃತ್ತಿಗೆ ಗೌರವವನ್ನು ಸಲ್ಲಿಸಲು ಭಾರತದಲ್ಲಿ 1991 ರಲ್ಲಿ ಕೇಂದ್ರ ಸರ್ಕಾರ ಜುಲೈ 1 ರಾಷ್ಟ್ರೀಯ ದಿನವನ್ನಾಗಿ ಆಚರಣೆಯನ್ನು ಜಾರಿಗೊಳಿಸಿತು.

docday

 ವೈದ್ಯರ ದಿನದ ಆಚರಣೆಯ ವಿಶೇಷತೆ ವೈಯಕ್ತಿಕ ಮತ್ತು ಸಮುದಾಯದ ಮಟ್ಟದಲ್ಲಿ ವೈದ್ಯರ ಸೇವೆಯನ್ನು ಗುರುತಿಸಲು ಸರ್ಕಾರ ಮತ್ತು ಸರ್ಕಾರೇತರ ಆರೋಗ್ಯ ಸಂಸ್ಥೆಗಳು ಇವರ ಕೊಡುಗೆಗಳನ್ನು ತಿಳಿಸಲು ಈ ದಿನವನ್ನು ಆರೋಗ್ಯ ಸಂಸ್ಥೆಗಳಲ್ಲಿ, ವಿವಿಧ ಆರೋಗ್ಯ ಕೇಂದ್ರಗಳಲ್ಲಿ ಆಚರಿಸಲಾಗುತ್ತದೆ. ಈ ದಿನ ಸಾರ್ವಜನಿಕ ಸ್ಥಳಗಳಲ್ಲಿ ಉಚಿತ ವೈದ್ಯಕೀಯ ತಪಾಸಣೆ, ಉಚಿತ ರಕ್ತ ತಪಾಸಣೆ, ಹಲವು ಶಿಬಿರಗಳನ್ನು ಏರ್ಪಡಿಸುವುದು, ಹಾಗೂ ಜನರಲ್ಲಿ ಉತ್ತಮ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು ಮತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

docday

ವೈದ್ಯಕೀಯ ವೃತ್ತಿಯನ್ನು ಆಯ್ಕೆ ಮಾಡಲು ಮತ್ತು ಸಮರ್ಪಕವಾಗಿ ಬಳಸಲು ಯುವಕರಲ್ಲಿ ಉತ್ತೇಜನ ತುಂಬಲು ಶಾಲಾ ಕಾಲೇಜು ಮಟ್ಟದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ನಡೆಯುತ್ತದೆ. ಹೀಗೆ ಜುಲೈ 1 ಈ ದಿನವನ್ನು ಎಲ್ಲಾ ವೈದ್ಯರಿಗೆ ಹಾಗೂ ಅವರ ನಿಸ್ವಾರ್ಥ ಸೇವೆಗೆ ಧನ್ಯವಾದವನ್ನು ಸಮರ್ಪಿಸುತ್ತೇವೆ..

ಡಿ.ಎಸ್.ಭಾವಿಮನಿ, ಹುಕ್ಕೇರಿ

Read All News