ತೆರಿಗೆ ವಂಚನೆ ಆರೋಪದ ಮೇಲೆ ಮತ್ತು ನ್ಯೂಯಾರ್ಕ್‌ನಲ್ಲಿ ಕ್ರಿಪ್ಟೋಕರೆನ್ಸಿ ವಂಚನೆ ಪ್ರಕರಣದಲ್ಲಿ ದೋಷಿಯಾದ ಮ್ಯಾಕ್‌ಫೀ ಯುನೈಟೆಡ್ ಸ್ಟೇಟ್ಸ್ ಅಧಿಕಾರಿಗಳಿಂದ ಪರಾರಿಯಾಗಿದ್ದರು.
ಅಕ್ಟೋಬರ್ 3 ರಂದು ಬ್ರಿಟಿಷ್ ಪಾಸ್ಪೋರ್ಟ್ನೊಂದಿಗೆ ಇಸ್ತಾಂಬುಲಗೆ ಪಲಾಯನ ಮಾಡಲು ಹೊರಟಿದ್ದಾಗ ಮ್ಯಾಕ್ಅಫಿಯನ್ನು ಬಾರ್ಸಿಲೋನಾ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು.
ಬುಧವಾರ ಸ್ಪೇನ್‌ನ ರಾಷ್ಟ್ರೀಯ ನ್ಯಾಯಾಲಯವು ಅವರನ್ನು ಯುಎಸ್‌ಗೆ ಹಸ್ತಾಂತರಿಸಲು ಅನುಮೋದನೆ ನೀಡಿತ್ತು. ಅಪರಾಧ ಸಾಬೀತಾದರೆ, ಅವರು 30 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸ ಬೇಕಾಗಿತ್ತು.
75 ವರ್ಷದ ಮ್ಯಾಕ್‌ಫೀ 1987ರಲ್ಲಿ ಮೊದಲ ಆಂಟಿವೈರಸ ಕಂಡುಹಿಡಿದಿದ್ದರು. 2011ರಲ್ಲಿ ಇಂಟೆಲ್ ಕಂಪನಿ ಮ್ಯಾಕ್‌ಫೀ ಅವರ ಸಾಫ್ಟ್ವೇರ್ ಕಂಪನಿಯನ್ನು ಖರೀದಿಸಿತ್ತು ಮತ್ತು ಇನ್ನು ಆಂಟಿವೈರಸಗೆ ಮ್ಯಾಕ್‌ಫೀ ಎಂದೇ ಹೆಸರು ಚಾಲ್ತಿ ಯಲ್ಲಿದೆ ಇದು ವಿಶ್ವಾದ್ಯಂತ 50 ಕೋಟಿ ಬಳಕೆದಾರರನ್ನು ಹೊಂದಿದೆ.