ಗಡಿನಾಡಿಗೆ ಅಂಟಿದ ಹೊರ ರಾಜ್ಯದ ನಂಟು, ಬೆಳಗಾವಿಗೆ ಬಿಟ್ಟು ಬಿಡದೆ ಕಾಡುತಿದೆ ಕೋರೊನಾ

  • 15 Jan 2024 , 3:00 AM
  • Belagavi
  • 144
ಬೆಳಗಾವಿ: ಗಡಿನಾಡು ಬೆಳಗಾವಿಯಲ್ಲಿ ಮತ್ತೆ ಇಂದು 13 ಕೊರೊನ ಪಾಸಿಟಿವ್ ಪತ್ತೆಯಾಗಿವೆ. ಬೆಳಗಾವಿ ಜಿಲ್ಲೆಗೆ ಹೊರ ರಾಜ್ಯದ ನಂಜು ಬಿಟ್ಟು ಬಿಡದೆ ಕಾಡುತ್ತಿದ್ದು, ಜಿಲ್ಲೆಯ ಜನರನ್ನು ಆತಂಕಕ್ಕೆ ದೂಡಿದೆ. ಈ ಮೊದಲು ತಬ್ಲಿಗ್, ಅಜ್ಮೀರ, ಹಾಗೂ ಮುಂಬೈ ಬಳಿಕ ಜಾರ್ಖಂಡ್ ನಿಂದ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಬೆಳಗಾವಿಗೆ ಮೇ.6ರಂದು ಜಾರ್ಖಂಡ್ ನಿಂದ ವಾಪಸ್ಸು ಜಿಲ್ಲೆಗೆ 44 ಜನ್ರು ಆಗಮಿಸಿದ್ದರು. ನಂತರ ಅವರನ್ನು ಜಿಲ್ಲೆಯ ಅಥಣಿ ತಾಲೂಕಿನ ಸವದಿ ಗ್ರಾಮದ ಸರ್ಕಾರಿ ಕಟ್ಟಡದ ಒಂದರಲ್ಲಿ ಕ್ವಾರಂಟೇನ್ ಮಾಡಲಾಗಿತ್ತು. ಮೊನ್ನೆ ತಾನೇ ನಾಲ್ಕು ಜನರಿಗೆ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು. ಇಂದು‌ ಮತ್ತೆ ಹದಿಮೂರು ಜನರಿಗೆ ಕೊರೊನ‌ ಸೊಂಕು ಧೃಡವಾಗಿದೆ. ಹಾಗಾಗಿ ಜಿಲ್ಲೆಯಲ್ಲಿ ಒಟ್ಟು 141 ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ಜಿಲ್ಲೆಯಾದ್ಯಂತ ಮತ್ತೆ ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಲಾಗಿದೆ. ಇನ್ನೂ ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ, ಇಂದು 13 ಕೇಸ್ ಬಂದರು ಕೂಡ ಬೆಳಗಾವಿ ಜಿಲ್ಲೆ ಕೋರೊನಾ ವಿಷಯದಲ್ಲಿ ಜಿಲ್ಲೆ ನಿಯಂತ್ರಣದಲ್ಲಿದೆ‌. ಸಮುದಾಯದಲ್ಲಿ ಸೊಂಕು ಹರಡಿಲ್ಲಾ ಅಲ್ಲದೇ ಕಮ್ಯುನಿಸ್ಟ್ ಹರಡುವಿಕೆಯನ್ನ ನಿಯಂತ್ರಿಸಲಾಗಿದೆ. ಹೀಗಾಗಿ ಈಗಾಗಲೇ 93 ಜನರು ಗುಣಮುಖರಾಗಿದ್ದು, ಕೊರೊನ ಕೇಸ್ ಗಳು ಕಡಿಮೆ ಆಗುತ್ತಾ ಸಾಗುತ್ತಿದೆ‌. ಅದಕ್ಕೆ ಭಯ ಪಡುವ ಅಗತ್ಯವಿಲ್ಲಾ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದ್ದಾರೆ.

Read All News