ಆಶಾ ಕಾರ್ಯಕರ್ತೆಯರ ಕಾರ್ಯ ಶ್ಲಾಘನೀಯ

  • 15 Jan 2024 , 1:01 AM
  • Belagavi
  • 137

ಹೊಸೂರ: ಕೊವಿಡ್ ಸಂದರ್ಭದಲ್ಲಿ ತಮ್ಮ ಕುಟುಂಬದ ಹಾಗೂ ತಮ್ಮ ಜೀವದ ಚಿಂತೆ ಬಿಟ್ಟು ಗ್ರಾಮಸ್ಥರ ಆರೋಗ್ಯಕ್ಕಾಗಿ ಪರಿಶ್ರಮಿಸಿದ ಆಶಾ ಕಾರ್ಯಕರ್ತರ ಕಾರ್ಯ ಶ್ಲಾಘನೀಯ ಎಂದು ಬೈಲಹೊಂಗಲ ಬಿಜೆಪಿ ಮಂಡಲ ಯುವ ಮೊರ್ಚಾ ಉಪಾಧ್ಯಕ್ಷ ಗೌಡಪ್ಪ ಹೊಸಮನಿ ಹೇಳಿದರು.

ಸಂಸದರಾದ ಮಂಗಲಾ ಅಂಗಡಿಯವರು ನೀಡಿದ ಕಿಟ್ಟ ಹಾಗೂ ಇಮ್ಯನಿಟಿ ಬೂಸ್ಟ್ ಬಾಟಲಗಳನ್ನು ಆಶಾ ಕಾರ್ಯಕರ್ತೆಯರಿಗೆ ನೀಡಿ ಮಾತನಾಡಿ, ಕೊವಿಡ್ ಎರಡನೆ ಅಲೆಯಲ್ಲಿ ತಮ್ಮ ಜೀವದ ಹಂಗು ತೊರೆದು ಜನರ ಸೇವೆಗಾಗಿ ಮನೆ ಮನೆಗೆ ತೆರಳಿ ಪ್ರತಿಯೊಬ್ಬರ ಆರೋಗ್ಯ ಪರೀಕ್ಷೆ ನಡೆಸಿ ಸಲಹೆ ಸೂಚನೆ ನೀಡುತ್ತಾ ಗ್ರಾಮದಲ್ಲಿ ಮಾಡಿದ ಇವರ ಸೇವೆಗೆ ಕೃತಜ್ಞತೆಗಳು ಎಂದರು. ಗ್ರಾಪಂ ಸದಸ್ಯ ಬಸವರಾಜ ವಿವೇಕಿ ಮಾತನಾಡಿ, ಆಶಾ ಕಾರ್ಯಕರ್ತೆಯರು ಕರೊನಾ ವಾರಿಯರ್ಸ್‌ರಾಗಿ ಗ್ರಾಮಸ್ಥರಿಗೆ ವ್ಯಾಕ್ಸಿನ್ ಕೊಡಿಸುವದು ಸೊಂಕಿತರ ಮಾಹಿತಿ ಕಲೆ ಹಾಕುವದು ಜನರಲ್ಲಿ ಜಾಗೃತಿ ಮೂಡಿಸಿ ಕರೊನಾದಿಂದ ಮುಕ್ತಿ ನೀಡಿಸಿದ ಇವರ ಕಾರ್ಯ ಪ್ರಶಂಸನೀಯ ಎಂದರು.

ಈ ಸಂದರ್ಭದಲ್ಲಿ ಸವದತ್ತಿ ಎಪಿಎಂಸಿ ಸದಸ್ಯ ಎಫ್. ಎಸ್.ಸಿದ್ದನಗೌಡರ ತಾಪಂ ಸದಸ್ಯ ಜಗದೀಶ್ ಬೂದಿಹಾಳ, ಗಣೇಶ ಪಿಕೆಪಿಎಸ್ ಅಧ್ಯಕ್ಷ ಗುರುಪಾದ ಕಳ್ಳಿ, ಮಲ್ಲಿಕಾರ್ಜುನ ಬೋಳೆತ್ತಿನ, ಪ್ರಶಾಂತ ಮಾಕಿ, ಸೊಮಪ್ಪ ಮುತವಾಡ, ಅಶೋಕ ಇಂಗಳಗಿ, ಬಸವರಾಜ ದುಗ್ಗಾಣಿ, ಮೋಹನ ವಕ್ಕುಂದ ಈರಣ್ಣ ಪಾಟೀಲ, ಅಜ್ಜಪ್ಪ ಸಂಗೊಳ್ಳಿ, ರಾಕೇಶ ನಾಗನಗೌಡರ, ಸೋಮು ಹುರಳಿ ಮಡಿವಾಳಪ್ಪ ಚಳಕೊಪ್ಪ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.

Read All News