ಜಾರ್ಜ್ ಫ್ಲಾಯ್ಡ್ ಅವರ ಹತ್ಯೆಗಾಗಿ ಮಿನ್ನಿಯಾಪೋಲಿಸ್ ಮಾಜಿ ಅಧಿಕಾರಿ ಡೆರೆಕ್ ಚೌವಿನ್ ಅವರಿಗೆ 22.5 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ.
BREAKING: Judge sentences Derek Chauvin to 22.5 years in prison for murder of George Floyd. https://t.co/VvJpsjyrANpic.twitter.com/1rw3sn6jqS
— NBC News (@NBCNews) June 25, 2021
ಚೌವಿನ್ ವಿರುದ್ಧ ಉದ್ದೇಶಪೂರ್ವಕ ಕೊಲೆ ಮತ್ತು ನರಹತ್ಯೆ ಆರೋಪ ಹೊರಿಸಲಾಗಿದೆ. ಈ ಕೊಲೆ ವಿಚಾರಣೆಯು ಮಾರ್ಚ್ 8, 2021 ರಂದು ಮಿನ್ನೇಸೋಟ ನಾಲ್ಕನೇ ನ್ಯಾಯಾಂಗದಲ್ಲಿ ಪ್ರಾರಂಭವಾಗಿತ್ತು ಮತ್ತು ಏಪ್ರಿಲ್ 20 ರಂದು ತೀರ್ಪುಗಾರರು ಈ ಆರೋಪಗಳಲ್ಲಿ ಡೆರೆಕ್ ತಪ್ಪಿತಸ್ಥರೆಂದು ತೀರ್ಮಾನಿಸಿದ್ದರು.

ಮೇ 25, 2020 ರಂದು ಇತರ ಮೂವರು ಅಧಿಕಾರಿಗಳೊಂದಿಗೆ ಫ್ಲಾಯ್ಡ್ ಎಂಬ ವ್ಯಕ್ತಿಯ ಕುತ್ತಿಗೆಯ ಮೇಲೆ ಚೌವಿನ್ ಸುಮಾರು ಒಂಬತ್ತು ನಿಮಿಷಗಳ ಕಾಲ ಮಂಡಿಯೂರಿದ್ದನು ಈ ಕಾರಣದಿಂದ ಪ್ಲಾಯ್ಡ ಸ್ಥಳದಲ್ಲೇ ಕೊನೆ ಉಸಿರೆಳೆದಿದ್ದ.
ಈ ಕೊಲೆಯು ಯುನೈಟೆಡ್ ಸ್ಟೇಟ್ಸ್‌ನಾದ್ಯಂತ ಅತೀ ದೊಡ್ಡ ಜನಾಂಗೀಯ ಪ್ರತಿಭಟನೆಗಳ ಸರಣಿಯನ್ನು ಪ್ರಾರಂಭಿಸಿತು ಮತ್ತು ಪ್ರಪಂಚದಾದ್ಯಂತ ಹರಡಿತ್ತು.