ಕೂಸು ಹುಟ್ಟೋ ಮುಂಚೆಯೇ ಕುಲಾಯಿ ಹೊಲಿಸೋಕೆ ಮುಂದಾದ ಕಾಂಗ್ರೆಸ್: ಡಿಸಿಎಂ ಸವದಿ ವ್ಯಂಗ್ಯ

  • 14 Jan 2024 , 10:59 PM
  • Belagavi
  • 112

ಬೆಳಗಾವಿ : ಕೂಸು ಹುಟ್ಟೋಕೆ ಮುಂಚೆನೇ ಕುಲಾಯ ಹೋಲಿಸೋಕೆ ಮುಂದಾಗಿದೆ ಕಾಂಗ್ರೆಸ್ ಎಂದು ಡಿಸಿಎಂ ಲಕ್ಷ್ಮಣ‌ ಸವದಿ ವ್ಯಂಗ್ಯವಾಡಿದರು.

ಶನಿವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ‌ ಬರುವುದಿಲ್ಲ ಅಂದ ಮೇಲೆ ಸಿಎಂ ಆಗುವ ಪ್ರಶ್ನೆ ಅವರಲ್ಲಿ ಏಕೆ ಬಂದಿದೆ. ಇನ್ನೂ ಕೂಸು ಹುಟ್ಟಲ್ಲ, ಕುಲಾಯ ಹಾಕೋ ಸಂದರ್ಭನೂ ಬರಲ್ಲ ಎಂದರು.

ಕೊರೋನ ವಿಚಾರವಾಗಿ ಮಾತನಾಡಿದ ಅವರು, ನಮಗೆ ಕೊರೋನ ಮೊದಲನೇ ಅಲೆ, ಎರಡನೇ ಅಲೆ ವಿಶೇಷ ಅನುಭವ ಕೊಟ್ಟಿದೆ.ಮೊದ್ಲನೇ ಅಲೆಯಲ್ಲಿ ಬ್ಲಾಕ್ ಫಂಗಸ್, ವೈಟ್ ಫಂಗ್ಸ್ ಇರಲಿಲ್ಲ.ಆದರೆ ಎರಡನೇ ಅಲೆಯಲ್ಲಿ ಇವೆಲ್ಲ ಬಂದವು, ಮೂರನೇ ಅಲೆಗೂ ನಾವು ಎಚ್ಚರಿಕೆಯಿಂದಿರಬೇಕು ಎಂದರು.

ಅಂತಾರಾಜ್ಯ ಸಂಚರಿಸುವ ಪ್ರತಿ ಪ್ರಯಾಣಿಕರನ್ನು ತಪಾಸಣೆ ನಡೆಯುವ ಚಿಂತನೆ ನಡೆಸಲಾಗಿದೆ. ಮಹಾರಾಷ್ಟ್ರ ಗಡಿ ಹಂಚಿಕೊಂಡಿರುವ ಜಿಲ್ಲೆಗಳಿಗೆ ಸಂಚರಿಸುವ ಪ್ರಯಾಣಿಕರಿಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡುವ ಚಿಂತನೆಯೂ ನಡೆದಿದೆ‌ ಎಂದರು.

ಲಾಕ್ ಡೌನ್ ಸಮಯದಲ್ಲಿ ಸಾರಿಗೆ ಇಲಾಖೆಗೆ ಸುಮಾರು 4000 ಕೊಟ್ಟಿಗಿಂತ ಹೆಚ್ಚು ನಷ್ಟವಾಗಿದೆ.ಮತ್ತೆ ಜುಲೈ 5 ಕ್ಕೆ ಸಾರಿಗೆ ಇಲಾಖೆ ಮುಷ್ಕರ ಹಿನ್ನೆಲೆ. ಈಗಾಗಲೇ ನಾಯಕರನ್ನು ಭೇಟಿ ಮಾಡಿದ್ದೇನೆ. ಪ್ರತಿಭಟನೆಯನ್ನ ಸ್ವಯಂಕೃತವಾಗಿ ಯಾರು ಮಾಡಿಲ್ಲ. ಸಾರಿಗೆ ನೌಕರರಿಗೆ ಪ್ರಚೋದನೆ ಮಾಡಿ, ಪ್ರತಿಭಟನೆ ಮಾಡಿಸಲಾಯಿತು. ಪಕ್ಷಕ್ಕೆ ಆಗದೆ ಇದ್ದವರು, ಕೆಲವರು ಪ್ರತಿಭಟನೆಗೆ ಪ್ರಚೋದನೆ ನೀಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Read All News