ಬೆಳಗಾವಿ: ಇಲ್ಲಿಯ ನಾಗನೂರು ಶ್ರೀ ಶಿವಬಸವೇಶ್ವರ ಟ್ರಸ್ಟ್ ವತಿಯಿಂದ ಬೆಳಗಾವಿಯ ದೇವರಾಜ ಅರಸ್ ಕಾಲನಿಯಲ್ಲಿ ನಡೆಸಲಾಗುತ್ತಿರುವ ವೃದ್ಧಾಶ್ರಮದ ವಾಸಿಗಳಿಗೆ ಬೆಳಗಾವಿಯ ಸುರೇಶ ಯಾದವ ಫೌಂಡೇಶನ್ ವತಿಯಿಂದ ಮತ್ತು ಕಾರಂಜಿ ಶ್ರೀಮಠದ ಶ್ರೀ ಮ.ನಿ.ಪ್ರ.ಗುರುಸಿದ್ಧ ಮಹಾಸ್ವಾಮಿಗಳ ಸಾನಿಧ್ಯದಲ್ಲಿ N-95 ಮಾಸ್ಕ್ ಹಾಗೂ ಹಣ್ಣು ವಿತರಿಸಲಾಯಿತು.
ಈ ವಿತರಣಾ ಕಾರ್ಯದಲ್ಲಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಶ್ರೀ ಸುರೇಶ ಯಾದವ, ವೃದ್ಧಾಶ್ರಮದ ಸಂಯೋಜಕರಾದ ಶ್ರೀ M.S.ಚೌಗಲಾ, ಪ್ರಥಮ ದರ್ಜೆ ಗುತ್ತಿಗೆದಾರರಾದ ಶ್ರೀ N.S.ಬಿರಾದಾರ, ಶಿವಯೋಗಿ ಶಾಲೆಯ ಅಧ್ಯಕ್ಷ ಶ್ರೀ ಅಶೋಕ ಧರಿಗೌಡರ ಉಪಸ್ಥಿತರಿದ್ದರು.ಸೇರಿದಂತೆ ಅನೇಕರು ಇದ್ದರು