ವಿಕಲಚೇತನ ಸ್ನೇಹಿ ಶೌಚಾಲಯ ಮತ್ತು ನೂತನ ಕಟ್ಟಡ ಉದ್ಘಾಟಿಸಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್

  • 15 Jan 2024 , 3:17 AM
  • Belagavi
  • 101

ಬೆಳಗಾವಿ: ಇವತ್ತು ಬೆಳಗಾವಿಯ ತಾಲೂಕ ಪಂಚಾಯತ್ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡ ವಿಕಲಚೇತನ ಸ್ನೇಹಿ ಶೌಚಾಲಯ ಮತ್ತು ನೂತನ ಕಟ್ಟಡವನ್ನು ಉದ್ಘಾಟಿಸಿ ಹೆಬ್ಬಾಳ್ಕರವರು ಮಾತನಾಡಿದರು.

ಈ ಕಟ್ಟಡವು ಬೆಳಗಾವಿ ತಾಲೂಕ ಪಂಚಾಯತಿಯ ಸಂಯುಕ್ತ ಅನುದಾನದಲ್ಲಿ ನಿರ್ಮಾಣಗೊಂಡಿದ್ದು, ಬೆಳಗಾವಿ ಶಹರನಲ್ಲಿ ಇದು ಮೊದಲ ವಿಕಲಚೇತನ ಸ್ನೇಹಿ ಶೌಚಾಲಯ ಹಾಗೂ ಸಭಾ ಭವನ ಕಟ್ಟಡವೆಂದು ಹೇಳಲು ಹೆಮ್ಮೆ ಎನಿಸುತ್ತಿದೆ ಎಂದರು

ಸುಮಾರು ವಷಗಳಿಂದ ವಿಕಲಚೇತನರು ಶೌಚಾಲಯ ಹಾಗೂ ವಿಶ್ರಾಂತಿ ತಗೆದುಕೊಳ್ಳಲು ಸಭಾಭವನದ ಬೇಡಿಕೆ ಇಟ್ಟಿದ್ದರು ಎಂಬುದನ್ನು ಮನಗಂಡು, ಇವತ್ತು ಅವರ ಬೇಡಿಕೆಯಂತೆ ಶೌಚಾಲಯ ಹಾಗೂ ಸಭಾ ಭವನ ಕಟ್ಟಡವನ್ನು ಉದ್ಘಾಟಿಸಿ ಅವರ ಬೇಡಿಕೆಗಳಿಗೆ ತ್ವರಿತಗತಿಯಲ್ಲಿ ಸ್ಪಂದಿಸಿದ್ದೇನೆ ಎಂದು ಹೆಬ್ಬಾಳ್ಕರ್ ತಿಳಿಸಿದ್ದಾರೆ.

ವಿಕಲಚೇತನರು ದೇವರ ಮಕ್ಕಳಿದ್ದಂತೆ, ಅವರನ್ನು ನಾವೆಲ್ಲರೂ ಬೆಳೆಸಿ, ಪೋಷಿಸುವ ಮೂಲಕ ಅವರ ಬೆಳವಣಿಗೆಗೆ ಸಹಕರಿಸೋಣ, ಈ ಸಂದರ್ಭದಲ್ಲಿ ನಾನು ವಿವಿಧ ಇಲಾಖೆಯ ಅಧಿಕಾರಿಗಳಿಗೆ ಹೇಳುವುದೇನೆಂದರೆ ವಿಕಲಚೇತನರ ಸಂಬಂಧಪಟ್ಟ ಸಮಸ್ಯೆಗಳಿಗೆ ಅಧಿಕಾರಿಯಾಗಿ ಮಾತ್ರವಲ್ಲದೆ ಮಾನವೀಯತೆ ದೃಷ್ಟಿಯಿಂದ ಸ್ಪಂದಿಸುವ ಮೂಲಕ ನೇರವಾಗೋಣ.

ಈ ಸಂದರ್ಭದಲ್ಲಿ ನಾನು ಎಲ್ಲ ವಿಕಲಚೇತನರಿಗೆ ತಿಳಿಸುವುದೇನೆಂದರೆ ಸರ್ಕಾರದಿಂದ ಯಾವುದೇ ಯೋಜನೆಗಳು ಬಂದ್ರೆ ತ್ವರಿತಗತಿಯಲ್ಲಿ ನಿಮೆಲ್ಲರಿಗೂ ತಿಳಸ್ತಿನಿ ಹಾಗೂ ಸದಾ ನಿಮ್ಮ ಕಷ್ಟಗಳಲ್ಲಿ ಭಾಗಿಯಾಗಿ ವಿಶೇಷವಾದ ಕಾಳಜಿಯನ್ನು ತೆಗೆದುಕೊಳ್ತಿನಿ ಎಂದರು.

ಈ ಸಂದರ್ಭದಲ್ಲಿ ತಾಲೂಕ ಪಂಚಾಯತ್ ಅಧ್ಯಕ್ಷರಾದ ಶಂಕರಗೌಡ ಪಾಟೀಲ, ಮಾರುತಿ ಸನದಿ, ರೇಖಾ ಚೌಗಲಾ, ಶಮೀನಾ ನದಾಫ್, ಗೌರವ್ವ ಪಾಟೀಲ, ನಿಲೇಶ ಚಂದಗಡ್ಕರ್, ನೀತಾ ದೇಕೊಲ್ಕರ್, ಕಜಲ್ ಪಾಟೀಲ, ಪದ್ಮಶ್ರೀ ಬಸ್ತವಾಡ, ಕಜಲ್ ಮಹಗಾವಕರ್ ಚಂದ್ರಪ್ಪ ನಾಯ್ಕ, ಭೀಮಪ್ಪ ಮಳಗಲಿ, ಮಲ್ಲಪ್ಪ ಸಂಪಗಾಂವಿ, ಮಧುರಾ ದೇರಸೆ, ನಾಗರಾಜ ಯರಗುದ್ದಿ, ಜೈಜನತ್ ನಸಡಿ, ಕೆ ಎಮ್ ಪಾಟೀಲ, ಆನಂದ ನಾಯಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Read All News