ದೆಹಲಿ: ಕೇಂದ್ರ ಸರ್ಕಾರ ಶುಕ್ರವಾರ ಸ್ಮಾರ್ಟ್ ಸಿಟೀಸ್ ಪ್ರಶಸ್ತಿ 2020ನ್ನು ಘೋಷಿಸಿದೆ ಮತ್ತು ಇದರಲ್ಲಿ ಸಮಗ್ರ ಅಭಿವೃದ್ಧಿಗಾಗಿ ಇಂದೋರ್ ಮತ್ತು ಸೂರತ ಪ್ರಶಸ್ತಿ ಪಡೆದವು.
india smart cities award 2020 !
— Smart Cities Mission (@SmartCities_HUA) June 25, 2021
The Overall Winners of India Smart Cities Award- ISAC 2020 are Indore and Surat! #TransformingUrbanIndia#TransformingUrbaLandscape#Winners#Awards#ISAC#SmartCitiesMissionpic.twitter.com/qCHdYyZEMM
ಸ್ಮಾರ್ಟ್ ಸಿಟಿಗಳ ಒಟ್ಟಾರೆ ಕಾರ್ಯಕ್ಷಮತೆಗಾಗಿ ಪ್ರಶಸ್ತಿಗಳನ್ನು ನೀಡಲಾಯಿತು ಈ ವಿಭಾಗದಲ್ಲಿ ಉತ್ತರ ಪ್ರದೇಶ ಟಾಪನಲ್ಲಿದ್ದರೆ , ಮಧ್ಯಪ್ರದೇಶ ಮತ್ತು ತಮಿಳುನಾಡು ನಂತರದ ಸ್ಥಾನ ಗಳಿಸಿವೆ.
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಸ್ಮಾರ್ಟ್ ನಗರಗಳನ್ನು ಸಾಮಾಜಿಕ ಅಂಶ, ಆಡಳಿತ, ಸಂಸ್ಕೃತಿ, ನಗರ ಪರಿಸರ, ನೈರ್ಮಲ್ಯ, ಆರ್ಥಿಕತೆ, ನೀರು ಮತ್ತು ನಗರ ಚಲನಶೀಲತೆ ಮುಂತಾದ ವಿಷಯಗಳ ಮೂಲಕ ವಿಜೇತರನ್ನು ಆಯ್ಕೆ ಮಾಡಿದೆ.
ಅಹಮದಾಬಾದ್ ಸ್ಮಾರ್ಟ್ ಸಿಟೀಸ್ ಲೀಡರ್ಶಿಪ್ ಪ್ರಶಸ್ತಿಯನ್ನು ಪಡೆದರೆ, ವಾರಣಾಸಿ ಮತ್ತು ರಾಂಚಿ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನಗಳನ್ನು ಪಡೆದಿದ್ದಾವೆ.
ಚಂಡೀಗಡ ಕೇಂದ್ರಾಡಳಿತ ಪ್ರದೇಶಗಳಲ್ಲಿ ಉನ್ನತ ಗೌರವಗಳನ್ನು ಪಡೆದರೆ, ಇಂದೋರ್ ತನ್ನ ‘ಕಾರ್ಬನ್ ಕ್ರೆಡಿಟ್ ಫೈನಾನ್ಸಿಂಗ್ ಮೆಕ್ಯಾನಿಸಂ’ ಗಾಗಿ ನವೀನ ಐಡಿಯಾ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.