ಶ್ರೀಗಳಿಗೆ ವಲಿದು ಬಂತು ಗೌರವ

  • 15 Jan 2024 , 3:09 AM
  • Belagavi
  • 121

ಹೊಸೂರ: ಲಂಡನ್ ದ ಬಸವ ಅಂತರರಾಷ್ಟ್ರೀಯ ಪ್ರತಿಷ್ಠಾನದ ಸಹಕಾರದಲ್ಲಿ ಬೆಂಗಳೂರು ನಗರ ಶರಣ ಸಾಹಿತ್ಯ ಪರಿಷತ್ ಹಾಗೂ ಜಾನಪದ ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ಪ್ರತಿವರ್ಷ ನೀಡುವ "ಡಾ.ಎಂ.ಎಂ.ಕಲಬುರ್ಗಿ ಪ್ರಗತಿಪರ ಚಿಂತಕ ಪ್ರಶಸ್ತಿ" ಗೆ ಈ ಸಾಲಿನಲ್ಲಿ ಪ್ರಗತಿಪರ ಚಿಂತಕರು,

ಮೌಢ್ಯಗಳ ವಿರುದ್ದ ಜನರಲ್ಲಿ ಸದಾ ಜಾಗೃತಿ ಮೂಡಿಸುತ್ತಾ ವಚನ ಸಾಹಿತ್ಯದ ಪ್ರಚಾರಕರು ಸದಾ ಕಾಯಕ ತತ್ವವನ್ನು ಭೋದಿಸೂವ ಪೂಜ್ಯನೀಯ ಮುಂಡರಗಿ ತೋಂಟದಾರ್ಯ ನಿಜಗುಣಪ್ರಭು ಸ್ವಾಮೀಜಿ ಅವರನ್ನು ಪ್ರಸಕ್ತ ಸಾಲಿನಲ್ಲಿ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ರೂ 25ಸಾವಿರ ರೂಪಾಯಿ ನಗದು, ಫಲಕ ಒಳಗೊಂಡಿರುತ್ತದೆ.

ಇಂದು ರವಿವಾರ ಜೂ27 ರಂದು ಸಾಯಂಕಾಲ 4 ಘಂಟೆಗೆ ಕಿತ್ತೂರು ಸಮೀಪದ ಬೈಲೂರು ಗ್ರಾಮದ ನಿಷ್ಕಲ ಮಂಟಪದಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಜರುಗಲಿದೆ.

ಕೊವಿಡ್ ನಿಯಮಗಳ ಪಾಲನೆಯಿಂದ ಕಾರ್ಯಕ್ರಮ ಆನ್ ಲೈನ್ ದಲ್ಲಿ ನಡೆಯುವದರಿಂದ ಭಸವ ಭಕ್ತಾದಿಗಳು ಜೂಮ್ ಆ್ಯಪ್ ಮೂಲಕ ಮಿಟಿಂಗ್ ನಂ 87918767720 ಲಿಂಕ್ ದೊಂದಿಗೆ ಪಾಸ್ ವರ್ಡ 2021 ಬಳಸಿಕೊಂಡು ಕಾರ್ಯಕ್ರಮವನ್ನು ನೇರವಾಗಿ ವಿಕ್ಷೀಸಬಹುದಾಗಿದೆ ಎಂದು ಪೂಜ್ಯರ ಭಕ್ತ ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ತಿಳಿಸಿದ್ದಾರೆ.

Read All News