ಬಾಗಲಕೋಟೆ ಜಿಲ್ಲೆಯಲ್ಲಿ 26 ಜನ ಗುಣಮುಖ, 3 ಹೊಸ ಪ್ರಕರಣಗಳು ದೃಡ

  • 15 Jan 2024 , 12:06 AM
  • Bagalkot
  • 115

ಬಾಗಲಕೋಟೆ : ಜೂನ್ 26 (ಕರ್ನಾಟಕ ವಾರ್ತೆ) : ಜಿಲ್ಲೆಯಲ್ಲಿ ಕೋವಿಡ್‍ನಿಂದ 26 ಜನ ಗುಣಮುಖರಾಗಿದ್ದು, ವಿವಿಧ ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ. ಹೊಸದಾಗಿ 3 ಕೊರೊನಾ ಪ್ರಕರಣಗಳು 1 ಮೃತ ಪ್ರಕರಣಗಳು ಶನಿವಾರ ದೃಡಪಟ್ಟಿವೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 34951 ಕೋವಿಡ್ ಪ್ರಕರಣಗಳು ದೃಡಪಟ್ಟಿದ್ದು, ಈ ಪೈಕಿ ಇಲ್ಲಿಯವರೆಗೆ ಒಟ್ಟು 34161 ಜನ ಕೋವಿಡ್‍ನಿಂದ ಗುಣಮುಖರಾಗಿದ್ದಾರೆ. 1617 ಸ್ಯಾಂಪಲ್‍ಗಳ ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ಇಲ್ಲಿಯವರೆಗೆ ಒಟ್ಟು 678478 ಸ್ಯಾಂಪಲ್ ಪರೀಕ್ಷಿಸಲಾಗಿದ್ದು. ಅದರಲ್ಲಿ 641310 ನೆಗಟಿವ್ ಪ್ರಕರಣ, ಹಾಗೂ 314 ಮೃತ ಪ್ರಕರಣಗಳು ವರದಿಯಾಗಿರುತ್ತದೆ. ಇನ್ನು 476 ಮಾತ್ರ ಸಕ್ರಿಯ ಪ್ರಕರಣಗಳು ಇದ್ದು, ಇಲ್ಲಿವರೆಗೆ ಒಟ್ಟು 498 ಸ್ಯಾಂಪಲ್‍ಗಳು ಮಾತ್ರ ರಿಜೆಕ್ಟ ಆಗಿರುತ್ತವೆ.

ಹೊಸದಾಗಿ ಬಾಗಲಕೋಟೆ ತಾಲೂಕಿನಲ್ಲಿ 573 ಸ್ಯಾಪಲ್ ಪರೀಕ್ಷೆಯಿಂದ 0, ಬಾದಾಮಿ 205 ಪರೀಕ್ಷೆಯಿಂದ 1, ಬೀಳಗಿ 192 ಸ್ಯಾಂಪಲ್ ಪರೀಕ್ಷೆಯಿಂದ 0, ಜಮಖಂಡಿ 313 ಪರೀಕ್ಷೆಯಿಂದ 0, ಮುಧೋಳದಲ್ಲಿ 301 ಜನರ ಪರೀಕ್ಷೆಯಿಂದ 2 ಹಾಗೂ ಹುನಗುಂದಲ್ಲಿ 436 ಸ್ಯಾಂಪಲ್ ಪರೀಕ್ಷೆಯಿಂದ 0 ಜನರಲ್ಲಿ ಸೋಂಕು ದೃಡಪಟ್ಟಿವೆ. ಪಾಜಿಟಿವಿಟಿ ಪ್ರಮಾಣ ಶೇ 0.15 ಇರುತ್ತದೆ.

ಹೊಸದಾಗಿ ದೃಡಪಟ್ಟ 3 ಕೋವಿಡ್ ಪ್ರಕರಣಗಳಲ್ಲಿ 3 ಜನ ಹೋಮ್ ಐಸೋಲೇಷನದಲ್ಲಿ ಇದ್ದಾರೆ. ಜಿಲ್ಲೆಯಲ್ಲಿ ಅತೀ ಹೆಚ್ಚು ಮುಧೋಳ ತಾಲೂಕಿನಲ್ಲಿ ಶೇ. 0.66 ರಷ್ಟು ಕಂಡುಬಂದರೆ ಅತೀ ಕಡಿಮೆ ಶೇ.0 ರಷ್ಟು ಬಾಗಲಕೋಟೆ, ಬೀಳಗಿ, ಹುನಗುಂದ, ಜಮಖಂಡಿ ತಾಲೂಕಿನಲ್ಲಿ ಕಂಡುಬಂದಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Read All News