ಹಾವೇರಿ:ಹಿರೇಕೆರೂರು ವಿಧಾನಸಭಾ ಕ್ಷೇತ್ರದ ರಟ್ಟಿಹಳ್ಳಿ ತಾಲೂಕಿನ ಗುಂಡಗಟ್ಟಿ ಗ್ರಾಮದ ಕು. ನಮ್ರತಾ ಗುಡದಳ್ಳಿ (8 ವರ್ಷ) ಎಂಬ ಬಾಲಕಿಯ ಹೆಸರು ಇಂಡಿಯನ್ ಬುಕ್ ಆಫ್ ರೆಕಾರ್ಡಗೆ ಸೇರ್ಪಡೆಯಾಗಿದ್ದು, ಕು. ನಮ್ರತಾ ಗುಡದಳ್ಳಿ ಗೆ ಬಿಸಿ ಪಾಟೀಲ ಅಭಿನಂದನೆಗಳನ್ನು ತಿಳಿಸಿದ್ದಾರೆ.
ಹಲವಾರು ವಿಷಯಗಳಲ್ಲಿ ಪ್ರಾವಿಣ್ಯತೆ ಹೊಂದಿರುವ ಕು. ನಮ್ರತಾ ಅತಿ ಚಿಕ್ಕ ವಯಸ್ಸಿನಲ್ಲೇ ಇಂತಹ ಸಾಧನೆ ಮಾಡುವ ಮೂಲಕ ಗ್ರಾಮಕ್ಕೆ, ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾಳೆ. ಬಾಲಕಿಯ ಭವಿಷ್ಯ ಉಜ್ವಲವಾಗಲಿ, ಇನ್ನಷ್ಟು ಸಾಧನೆಗಳ ಮೂಲಕ ನಾಡಿನ ಹಾಗೂ ದೇಶದ ಕೀರ್ತಿಯನ್ನು ಹೆಚ್ಚಿಸಲಿ ಎಂದು ಶುಭಹಾರೈಸಿದ್ದಾರೆ.