ಬೆಳಗಾವಿ: ನಿಪ್ಪಾಣಿ ಮತಕ್ಷೇತ್ರದ ಭಾಟನಾಗನೂರಿನಲ್ಲಿ ಸುಮಾರು 3 ಎಕರೆಯಲ್ಲಿರುವ ಕೆರೆಯನ್ನು ಅಭಿವೃದ್ಧಿ ಮಾಡುವ ಸಲುವಾಗಿ, ಸ್ಥಳಕ್ಕೆ ಭೇಟಿ ನೀಡಿದ ಕ್ಷೇತ್ರದ ಶಾಸಕಿ ಮತ್ತು ಸಚಿವರಾದ ಶಶಿಕಲಾ ಜೊಲ್ಲೆ , ಕೆರೆಯ ಸುತ್ತಮುತ್ತಲಿನ ಪ್ರದೇಶವನ್ನು ವೀಕ್ಷಿಸಿದರು ನಮ್ಮ ಹಿರಿಯರು ಗ್ರಾಮಗಳ ಸುತ್ತಮುತ್ತ ನಿರ್ಮಿಸಿದ್ದ ಕೆರೆಗಳು ಅಳಿವಿನಂಚಿಗೆ ಸಾಗುತ್ತಿರುವುದು ವಿಷಾದನೀಯ ಸಂಗತಿ.
ಇದರ ಪರಿಣಾಮವಾಗಿ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಹೀಗಾಗಿ ಪ್ರಸ್ತುತ ದಿನಮಾನಗಳಲ್ಲಿ ಕೆರೆಗಳನ್ನು ಉಳಿಸುವುದು ಬಹಳ ಮಹತ್ವದ್ದಾಗಿದೆ. ಕೆರೆ ಉಳಿವಿಗೆ ಸ್ವಯಂ ಪ್ರೇರಣೆಯಿಂದ ಮುಂದಾದಾಗ ಮಾತ್ರ ಅದರ ಅಭಿವೃದ್ಧಿ ಸಾಧ್ಯ. ಹೀಗಾಗಿ ಗ್ರಾಮಗಳ ಸಮೃದ್ಧಿ, ಜಲಕ್ಷಾಮ ನಿವಾರಣೆಗಾಗಿ ಕೆರೆಗಳನ್ನು ಉಳಿಸಿ, ಅಭಿವೃದ್ಧಿಗೊಳಿಸೋಣ ಎಂದರು