ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖನ್ನು ಪ್ರತ್ಯೇಕ ದೇಶವೆಂದು ತೋರಿಸುವ ಮೂಲಕ ಟ್ವಿಟ್ಟರ ಭಾರತದ ಕೆಂಗಣ್ಣಿಗೆ ಗುರಿಯಾಗಿದೆ ಮತ್ತು ಈ ಉದ್ಧಟತನದಿಂದ ಟ್ವಿಟ್ಟರ ಕಠಿಣ ಕ್ರಮವನ್ನು ಎದುರಿಸಬೇಕಾಗುತ್ತದೆ.

ಟ್ವಿಟ್ಟರ್ನ "ಟ್ವೀಪ್ ಲೈಫ್" ವಿಭಾಗದಲ್ಲಿ ಕಾಣಿಸಿಕೊಳ್ಳುವ ನಕ್ಷೆಯು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ ಬೇರೆ ದೇಶಗಳೆಂದು ತೋರಿಸಿದೆ.
ವಿಕೃತ ನಕ್ಷೆಯನ್ನು ಟ್ವಿಟರ್ ಬಳಕೆದಾರರು ಫ್ಲ್ಯಾಗ್ ಮಾಡಿದ್ದಾರೆ ಮತ್ತು ಅನೇಕರು ಕೋಪಗೊಂಡು ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.ಈ ಕಾರಣ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬಹುದು ಎಂದು ಮೂಲಗಳು ತಿಳಿಸಿವೆ.
ಭಾರತದ "ಸಾರ್ವಭೌಮತ್ವ ಮತ್ತು ಸಮಗ್ರತೆಯನ್ನು ಅಗೌರವಗೊಳಿಸುವ ಟ್ವಿಟರ್‌ನ ಯಾವುದೇ ಪ್ರಯತ್ನವು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ" ಎಂದು ಸರ್ಕಾರ ಎಚ್ಚರಿಕೆ ನೀಡಿದೆ.