ಬೆಳಗಾವಿ: ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ 15 ಲಕ್ಷ ರೂ. ವೆಚ್ಚದ ಗರಡಿ ಮನೆ ನಿರ್ಮಾಣ, ಮುತ್ತೇಶ್ವರ ದೇವಸ್ಥಾನದ ಮಹಾದ್ವಾರ ನಿರ್ಮಾಣ ಮತ್ತು ಮೋಟ್ ಬಸಪ್ಪ ದೇವಸ್ಥಾನದ ಕಟ್ಟಡ ನಿರ್ಮಾಣಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಡಾ. ರಾಜೇಂದ್ರ ಸಣ್ಣಕ್ಕಿ, ಉದಗಟ್ಟಿ ಗ್ರಾಪಂ ಅಧ್ಯಕ್ಷ ಪಾಂಡುರಂಗ ದೊಡಮನಿ, ತಾಪಂ ಮಾಜಿ ಸದಸ್ಯ ನಾಗಪ್ಪ ಮಂಗಿ, ಮುಖಂಡರಾದ ಮುತ್ತೇನಗೌಡ ಪಾಟೀಲ, ಮುದಕಪ್ಪ ತಳವಾರ, ಬಾಳಪ್ಪ ಕಲ್ಲೋಳಿ, ಮುತ್ತೆಪ್ಪ ಆಡಿನ, ಬಸಪ್ಪ ಶೀಗಿಹಳ್ಳಿ, ಯಲ್ಲಪ್ಪಸ್ವಾಮಿ ವಡೇರ, ರಾಮಚಂದ್ರ ಪತ್ತಾರ, ಕಾಮಪ್ಪ ಚಿಗಡೊಳ್ಳಿ ಮುಂತಾದವರು ಉಪಸ್ಥಿತರಿದ್ದರು.