ಬೆಳಗಾವಿ: ವಿಕಲಚೇತನರಿಗೆ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ತರಬೇತಿ ನೀಡಲು ಸ್ವಯಂ ಸೇವಾ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಬೆಳಗಾವಿ ಜಿಲ್ಲೆಯ ವಿವಿಧ ಬಗೆಯ ವಿದ್ಯಾವಂತ ವಿಕಲಚೇತನ ವ್ಯಕ್ತಿಗಳಿಗೆ ಅವರ ಜೀವನೋಪಾಯ ಅಭಿವೃದ್ಧಿ ಪಡಿಸಲು ಒಂದೇ ರೀತಿಯಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ನೀಡುವ ಹಿನ್ನೆಲೆ ಅಂಗವಿಕಲರ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ಅರ್ಹ ಸ್ವಯಂ ಸೇವಾ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತಿಯುಳ್ಳ ಸ್ವಯಂ ಸೇವಾ ಸಂಸ್ಥೆಗಳು ಕೆಳಕಂಡ ದಾಖಲಾತಿಗಳನ್ನು ಜು. 19 ರ ಒಳಗಾಗಿ ಜಿಲ್ಲಾ ಕಚೇರಿಗೆ ದ್ವಿ ಪ್ರತಿಯಲ್ಲಿ ಸಲ್ಲಿಸಲು ತಿಳಿಸಲಾಗಿದೆ.
ಸಂಸ್ಥೆಗೆ ಇರಬೇಕಾದ ಅರ್ಹತೆಗಳು:
ಸಂಸ್ಥೆಯ ಸೊಸೈಟಿ ಕಾಯ್ದೆಯಡಿ ನೊಂದಣಿಯಾಗಿ 5 ವರ್ಷ ಆಗಿರಬೇಕು. ಹಿಂದಿನ 2 ವರ್ಷಗಳ ಅಡಿಟ್ಟ ಮತ್ತು ವಾರ್ಷಿಕ ವರದಿ, ಸಂಸ್ಥೆಯು ಕಟ್ಟಡದ ಬಾಡಿಗೆ ಕರಾರು ಪತ್ರ ಹೊಂದಿರಬೇಕು, ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ 2016 ರಡಿ ನೊಂದಣಿಯಾಗಿರಬೇಕು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂ.0831-2476096 ಗೆ ಸಂಪರ್ಕಿಸಬಹುದು