ಸುರೇಶ ಅಂಗಡಿ ಕನಸು ನನಸು ಮಾಡುವೆ: ಸಂಸದೆ ಮಂಗಳಾ

  • 15 Jan 2024 , 1:05 AM
  • Belagavi
  • 99

ಬೆಳಗಾವಿ: ನಗರದ ಲಕ್ಷ್ಮೀ ಟೆಕಡಿಯಲ್ಲಿರುವ ಹುಕ್ಕೇರಿ ಹಿರೇಮಠದ ಶಾಖೆಗೆ ಸಂಸದೆ ಮಂಗಳಾ ಅಂಗಡಿ ಶನಿವಾರ ಭೇಟಿ ನೀಡಿ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಸದೆ ಮಂಗಳಾ ಅಂಗಡಿ, ಹುಕ್ಕೇರಿ ಶ್ರೀಗಳ ಮೇಲೆ ಸುರೇಶ ಅಂಗಡಿ ಸರ್ ವಿಶೇಷ ಶೃದ್ದೆ ಇಟ್ಟುಕೊಂಡಿದ್ದರು.

ಅವರ ಮಾರ್ಗದರ್ಶನದಲ್ಲಿ ರಾಜ್ಯ ಹಾಗೂ ದೇಶದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅವರ ಕನಸನ್ನು ನಾನು ನನಸು ಮಾಡುವೆ ಜಿಲ್ಲೆಯ ಜನರ ಸಂಕಷ್ಟಗಳಿಗೆ ಸ್ಪಂದಿಸುವೆ ಎಂದರು. ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ದಿ.ಕೇಂದ್ರ ಸಚಿವರಾಗಿದ್ದ ಸುರೇಶ ಅಂಗಡಿ ಅವರು, ಸಂಸದರಾಗಿ ರೈಲ್ವೆ ಸಚಿವರಾಗಿ ಸಾಕಷ್ಟು ಜನಪರ ಕೆಲಸ ಮಾಡಿದ್ದಾರೆ.

ಅವರ ಸ್ಥಾನವನ್ನು ಸಂಸದೆಯಾಗಿ ಮಂಗಳಾ ಅಂಗಡಿ ಅವರು ತುಂಬಲಿ. ನೂತನ ಸಂಸದರಾದ ಬಳಿಕ ಶ್ರೀಮಠಕ್ಕೆ ಬಂದು ಆಶೀರ್ವಾದ ಪಡೆದಿದ್ದಾರೆ. ಜಿಲ್ಲೆಯ ಜನರಿಗೆ ನ್ಯಾಯ ವದಗಿಸಿಕೊಡುವುದು ಅವಶ್ಯವಾಗಿದೆ ಎಂದರು. ಹುಕ್ಕೇರಿ ಹಿರೇಮಠದ ಮೇಲೆ ದಿ. ಕೇಂದ್ರ ಸಚಿವ ಸುರೇಶ ಅಂಗಡಿ ಅವರು ಅಪಾರವಾದ ಪ್ರೀತಿ ಇಟ್ಟುಕೊಂಡಿದ್ದರು ಎಂದು ಸ್ಮರಿಸಿದರು.

ಈ ಸಂದರ್ಭದಲ್ಲಿ ವೀರುಪಾಕ್ಷಯ್ಯ ನೀರಲಗಿಮಠ, ಸೋಮಶೇಖರ್ ಹಿರೇಮಠ, ಸಂಗಯ್ಯ ಶಾಸ್ತ್ರೀಗಳು, ವಿದ್ವಾನ್ ಚಂದ್ರಶೇಖರ ಶಾಸ್ತ್ರೀಗಳು, ಶಂಕರಯ್ಯ ಶಾಸ್ತ್ರೀಗಳು, ಶಿವಾನಂದ ಹಿರೇಮಠ ಸೇರಿದಂತೆ ಹಲವಾರು ಉಪಸ್ಥಿತರಿದ್ದರು.

Read All News