ಕುಂದಾನಗರಿಯಲ್ಲಿ ಮತ್ತೆ ಕಿಲ್ಲರ್ ಕರೋನ ರಣಕೇಕೆ

  • 18 Dec 2023 , 11:58 PM
  • Belagavi
  • 110

ಬೆಳಗಾವಿ: ಮಹಾಮಾರಿ ಕೊರೋನಾ ವೈರಸ್ ಇಂದು ತನ್ನ ಅಟ್ಟಹಾಸ ಮುಂದುವರಿಸಿದೆ. ಕುಂದಾನಗರಿಯಲ್ಲಿ ಕೊರೋನಾ ರಣಕೇಕೆ ಹಾಕುತ್ತಿದೆ. ಇಂದು ಒಂದೇ ದಿನಾ 27 ಜನರಿಗೆ ಕೊರೋನಾ ಪಾಸಿಟಿವ್ ತಗುಲಿರುವದು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಬಿಡುಗಡೆಗೊಳಿಸಿದ ಬುಲೆಟಿನ್ನಲ್ಲಿ ಹೇಳಿದೆ. ಜಿಲ್ಲೆಯಲ್ಲಿ ಸದ್ಯ 66 ಸಕ್ರಿಯ ಪ್ರಕರಣಗಳು ಕಂಡುಬಂದಿವೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 383 ಕ್ಕೆ ಏರಿಕೆಯಾಗಿದೆ . 

ಜಿಲ್ಲೆಯ ಅಥಣಿ ತಾಲ್ಲೂಕು 12, ಬೆಳಗಾವಿ ನಗರ ಮತ್ತು ತಾಲ್ಲೂಕು 11, ಖಾನಾಪೂರ ತಾಲ್ಲೂಕು 1, ಸವದತ್ತಿ ತಾಲ್ಲೂಕು 3 ಒಟ್ಟು 27 ಜನ ಸೋಂಕಿತರು ಪತ್ತೆಯಾಗಿವೆ. ಗುಣಮುಖರಾಗಿ ಆಸ್ಪತ್ರೆಯಿಂದ 313 ಜನ ಬಿಡುಗಡೆ ಮಾಡಲಾಗಿದೆ. ಸೋಂಕಿತರ ಸಂಖ್ಯೆ ದಿನೆ ದಿನೆ ಹೆಚ್ಚುತ್ತಿರುವುದರಿಂದ ಜಿಲ್ಲೆಯ ಜನತೆಯಲ್ಲಿ ಆತಂಕ ಎದುರಾಗಿದೆ ಇಂದು ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ ಅಲ್ಲಿ ತಿಳಿಸಲಾಗಿದೆ 

Read All News