ದೆಹಲಿ: 'ಸುಲ್ಲಿ ಡೀಲ್ಸ್' ಎಂಬ ವೆಬ್‌ಸೈಟ್ 'ಗಿಟಹಬ್ ' ಎಂಬ ಹೋಸ್ಟಿಂಗ್ ವೇದಿಕೆಯಲ್ಲಿ ಪತ್ರಕರ್ತರು, ಕಾರ್ಯಕರ್ತರು, ವಿಶ್ಲೇಷಕರು, ಕಲಾವಿದರು ಮತ್ತು ಸಂಶೋಧಕರು ಸೇರಿದಂತೆ ಮುಸ್ಲಿಂ ಮಹಿಳೆಯರನ್ನು ಹರಾಜಿಗೆ ಇಟ್ಟಿದ್ದರು.
ಈ ವಿಷಯದ ಬಗ್ಗೆ ತನಿಖೆ ನಡೆಸಲು ಮತ್ತು ಸಂಬಂಧಿತ ವಿಭಾಗಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸುವಂತೆ ಕೋರಿ ಅಧ್ಯಕ್ಷರಾದ ಎಂ.ಎಸ್. ರೇಖಾ ಶರ್ಮಾ ಅವರು ದೆಹಲಿಯ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದರು.
ಪುರುಷರು "ಸುಲ್ಲಿ ಡೀಲ ಆಫ್ ದಿ ಡೇ" ಎಂದು ಟ್ವಿಟರ್‌ನಲ್ಲಿ ಹಂಚಿಕೊಳ್ಳಲು ಪ್ರಾರಂಭಿಸಿದಾಗ ಈ ಅಪ್ಲಿಕೇಶನ್ ಬೆಳಕಿಗೆ ಬಂದಿತು ತಕ್ಷಣವೇ ಗಿಟ್‌ಹಬನಿಂದ ಈ ಅಪ್ಲಿಕೇಶನನ್ನು ತೆಗೆದುಹಾಕಲಾಗಿದೆ ಎಂದು ತಿಳಿದು ಬಂದಿದೆ.
ಏನಿದು ಸುಲ್ಲಿ ಡೀಲ್ಸ್...?
ಸುಲ್ಲಿ ಡೀಲ್ಸ್ ಒಂದು ಆನ್‌ಲೈನ್ ಆ್ಯಪ್ ಆಗಿ ಅಭಿವೃದ್ಧಿಪಡಿಸಲಾಗಿದ್ದು, ಈ ಆಪ್ ನಲ್ಲಿ ನೂರಾರು ಮುಸ್ಲಿಂ ಮಹಿಳೆಯರ ಕದ್ದ ಫೋಟೋಗಳನ್ನು ಪೋಸ್ಟ್ ಮಾಡಲಾಗತಿತ್ತು ನಂತರ ಆನ್‌ಲೈನ್ ಹರಾಜಿನಲ್ಲಿ ಇರಿಸಲಾಗುತಿತ್ತು.