ಪ್ರವಾಹ ಹಾನಿ ಕುರಿತು ವಿಶೇಷ ಅಧಿವೇಶನಕ್ಕೆ ಒತ್ತಾಯಿಸುವೆ: ಸಿದ್ದರಾಮಯ್ಯ

  • 15 Jan 2024 , 2:28 AM
  • Belagavi
  • 118

ಬೆಳಗಾವಿ:ಪ್ರವಾಹದ ಕುರಿತು ಚರ್ಚೆ ನಡೆಸಲು ತಕ್ಷಣವೇ ಅಧಿವೇಶನ ಕರೆಯಲು ಸರ್ಕಾರವನ್ನು ಒತ್ತಾಯ ಮಾಡಲಾಗುವುದು‌ ಎಂದು ವಿರೋಧ ಪಕ್ಷದ‌ನಾಯಕ‌ ಸಿದ್ದರಾಮಯ್ಯ ಹೇಳಿದರು.

ಬೆಳಗಾವಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಕಳೆದ 2019ರಿಂದ ಇಲ್ಲಿಯವರೆಗೆ ಕೇಂದ್ರ ಸರ್ಕಾರದಿಂದ‌ ರಾಜ್ಯಕ್ಕೆ ನೆರೆ ಪರಿಹಾರ ಘೋಷಣೆ ಮಾಡಿಲ್ಲ. ಪ್ರದಾನಿಗಳು ರಾಜ್ಯಕ್ಕೆ ಬರಲೇ ಇಲ್ಲ. ಬೆಳಗಾವಿಯಲ್ಲಿ ಆಗಿರುವ ಪ್ರವಾಹದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಶಾಸಕರ ಹತ್ತಿರ ಕೇಳಿ ತಿಳಿದುಕೊಂಡಿದ್ದೇನೆ.ಹೀಗಾಗಿ ಸ್ಥಳ ಪರಿಶೀಲನೆ ನಡೆಸಿದ್ಮೇಲೆ ಖಚಿತವಾಗಿ ಪರಿಹಾರದ ಕುರಿತು ಹೇಳುತ್ತೇನೆ ಎಂದರು.

ಕಳೆದ 2019ರಿಂದ ಇಲ್ಲಿಯವರೆಗೆ ಕೇಂದ್ರ ಸರ್ಕಾರದಿಂದ‌ ರಾಜ್ಯಕ್ಕೆ ಪರಿಹಾರ ಕೊಡಲಿಲ್ಲ. ಕಳೆದ2019ರಲ್ಲಿ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪ್ರವಾಹ ಸಂಭವಿಸಿದ್ರೂ ಪ್ರದಾನಿಗಳು ಪ್ರಾವಾಹ ವೀಕ್ಷಣೆಗೆ ರಾಜ್ಯಕ್ಕೆ ಬರಲೇ ಇಲ್ಲ ಎಂದರು.

Read All News