ಹಡಪದರ ಕಾಯಕ ಅತ್ಯಂತ ಶ್ರೇಷ್ಠ ಕಾಯಕ

  • 14 Jan 2024 , 11:34 PM
  • Belagavi
  • 126

ಬೆಳಗಾವಿ: ಹಡಪದ ಸಮಾಜದ ಯುವ ಮುಖಂಡ ಬಸವರಾಜ ಹಡಪದ ಅವರನ್ನು ಜಿಲ್ಲೆಯ ಶಾಹುನಗರದ ನಿವಾಸದಲ್ಲಿ ಗೌರವಿಸುವ ಮೂಲಕ ಅಭಿಯಾನಕ್ಕೆ ಚಾಲನೆ ಇಂದು ನೀಡಲಾಯಿತು  ಈ ಸಂಧರ್ಭದಲ್ಲಿ ಬಸವ ಭೀಮ ಸೇನೆಯ ಅಧ್ಯಕ್ಷ ಆರ್.ಎಸ್.ದರ್ಗೆ ಮಾತನಾಡಿ ಹಡಪದ ಸಮಾಜದವರ ಕಾಯಕ ಅತ್ಯಂತ ಶ್ರೇಷ್ಠವಾದ ಕಾಯಕ. ಜಾತಿ, ಕುಲ ಧರ್ಮವೆನ್ನದೆ ಪ್ರತಿಯೊಬ್ಬರಿಗೂ ಸೇವೆ ನೀಡುವ ಹಡಪದರು ನಿಜವಾದ ಜಾತ್ಯಾತೀತರು. ವಿಶಾಲ ಹೃದಯದವರು ಎಂದು ಬಣ್ಣಿಸಿದರು. ಬಸವ ಪಂಚಮಿಯ ಅಂಗವಾಗಿ ಬಸವ ಭೀಮ ಸೇನೆಯ ವತಿಯಿಂದ ಜುಲೈ 26 ರರವರೆಗೆ ಹಮ್ಮಿಕೊಂಡಿರುವ ನಮ್ಮ ನಡೆ ನಮ್ಮ ಸಮುದಾಯಗಳ ಕಡೆ ಎಂಬ ಅಭಿಯಾನವನ್ನು ಹಮ್ಮಿಕೊಳ್ಳಲಾಗುವದು.

 ಅವರು ಮಾತನಾಡಿ ಹಡಪದರ ಸೇವೆ ಪಡೆಯದಿದ್ದರೇ, ಮನುಷ್ಯ ಮನುಷ್ಯನಂತೆ ಕಾಣುವದಿಲ್ಲ. ಬೆಳಿಗ್ಗೆ ಇಂತಹ ಶ್ರೇಷ್ಠ ಕಾಯಕ ಜೀವಿಗಳ ಮುಖವನ್ನು ನೋಡಿದರೇ, ಅಪಶಕುನವೆಂದು ವ್ಯಾಪಕವಾದ ಮೂಢ ನಂಬಿಕೆ ಬಿತ್ತಿದ್ದ ಕಾಲಘಟ್ಟದಲ್ಲಿ ವಿಶ್ವಗುರು ಬಸವಣ್ಣನವರು ಹಡಪದ ಅಪ್ಪಣ್ಣನವರನ್ನು ತಮ್ಮ ಆಪ್ತ ಕಾರ್ಯದರ್ಶಿಯನ್ನಾಗಿ ನೇಮಿಸಿಕೊಳ್ಳುವ ಮೂಲಕ ಹಡಪದ ಸಮಾಜಕ್ಕೆ ಗೌರವಯುತ ಸ್ಥಾನ ನೀಡಿದರು. ನಾವಿಂದು ಬಸವ ಮಾರ್ಗದಲ್ಲಿ  ನಡೆದು ಹಡಪದ ಸಮಾಜದ ಋಣ ತೀರಿಸಬೇಕು ಎಂದು ಹೇಳಿದರು.

 ಬಸವಣ್ಣನವರಿಂದ ಸ್ಥಾಪಿತವಾಗಿರುವ ಲಿಂಗಾಯತ ಧರ್ಮವೆಂದರೇ, ಕೇವಲ ಲಿಂಗಾಯತರಲ್ಲ. ಲಿಂಗಾಯತರು ಸೇರಿದಂತೆ 101 ಜಾತಿ, ಉಪ ಜತಿ, ಉಪ ಪಂಗಡಗಳನ್ನು ಹೊಂದಿರುವ ಬಹು ವಿಶಾಲವಾದ ಪರಿವಾರ. ಈ ಬಸವ ಬಳಗ ಮತ್ತೆ ಒಂದಾಗುವ ಮೂಲಕ ಆಂತರಿಕ ಹಾಗೂ ಬಾಹ್ಯ ವಿರೋಧಿಗಳನ್ನು ಮೆಟ್ಟಿ ನಿಲ್ಲಬೇಕು. ಸಶಕ್ತವಾದ ಸಮಾಜವಾಗಿ ರೂಪುಗೊಳ್ಳಬೇಕು.

 ವಿಶ್ವಗುರು ಬಸವಣ್ಣನವರ ಹಾಗೂ ಬಸವಾದಿ ಶರಣರ ತತ್ವಗಳು ದೇಶದ ಗಡಿಯಾಚೆಯೂ ಮನ್ನಣೆ ಪಡೆಯುತ್ತಿರುವ ಈ ವರ್ತಮಾನದಲ್ಲಿ ಬಸವ ಭೂಮಿಯಾಗಿರುವ ಕರ್ನಾಟಕದಲ್ಲಿ ಬಸವಾದಿ ಶರಣರ ಸಂದೇಶಗಳೇ ನಮ್ಮ ಉಸಿರಾಗಿಸಿಕೊಳ್ಳುವ ಮೂಲಕ ಇಡಿ ವಿಶ್ವಕ್ಕೆ ಬಸವ ಪರಿವಾರ ಮಾದರಿಯಾಗಬೇಕು. ಕರ್ನಾಟಕವು ವೈಚಾರಿಕತೆಯ ಬಸವ ಕರ್ನಾಟಕವನ್ನಾಗಿಸಬೇಕು. ಮಾನವೀಯತೆಯ ನೆಲೆಯಾಗಬೇಕು ಎಂದರು.

 ಸನ್ಮಾನ ಸ್ವೀಕರಿಸಿ ಮಾತನಾಡಿದ ಬಸವರಾಜ ಹಡಪದ, ಬಸವ ಭೀಮ ಸೇನೆ ಹಮ್ಮಿಕೊಂಡಿರುವ ಅಭಿಯಾನವೂ ಅತ್ಯಂತ ಅಭಿಮಾನಯುತವಾಗಿದೆ. ಬಸವ ಸಮಾಜಕ್ಕೆ ಮಾದರಿಯಾಗಿದೆ. ಬಸವ ಪಂಚಮಿಯ ಸಂದರ್ಭದಲ್ಲಿ ಹಡಪದ ಸಮಾಜಕ್ಕೆ ಗೌರವ ಸಲ್ಲಿಸಿರುವದಕ್ಕೆ ಹಡಪದ ಸಮಾಜವು ಬಸವ ಭೀಮ ಸೇನೆಗೆ ಋಣಿಯಾಗಿದೆ. ಎಂದು ತಿಳಿಸಿದರು.

 ಈ ಸಂಧರ್ಭದಲ್ಲಿ ಬಸವರಾಜ ಹಂಪಣ್ಣವರ, ರವಿ ನಾವಿ, ವಿಠ್ಠಲ ನಾವಿ, ಕಿರಣ ನಾವಿ, ಸಂಗಮೇಶ ಹಡಪದ, ಬಸವರಾಜ ಹಣಬರಟ್ಟಿ, ಸುಭಾಷ ಬೆಳ್ಳೇರಿ ಮುಂತಾದವರು ಉಪಸ್ಥಿತರಿದ್ದರು.

Read All News