ಬ್ರೆಜಿಲ್ :ಅಧ್ಯಕ್ಷ ಜೆರ್ ಬೋಲ್ಸನಾರೊ ಕೊರೋನಾ ಸೋಂಕು ತಗುಲಿರುವ ಕುರಿತು ತಾವೇ ಹೇಳಿಕೊಂಡಿದ್ದಾರೆ. ಕೊರೋನಾ ವೈರಸ್ ಈ ಹಿಂದೆ "ಸ್ವಲ್ಪ ಜ್ವರ" ಎಂದು ತಳ್ಳಿಹಾಕಿದ ಬಲಪಂಥೀಯ ಜನತಾವಾದಿ ಯಾಗಿದ್ದ ಇವರು ಆದರೆ ಇಗ ಸ್ವತ ಅಧ್ಯಕ್ಷ ಜೆರ್ ಗೆ ರೋಗಲಕ್ಷಣ ಕಂಡುಬಂದಿದೆ. ಸೋಮವಾರ ಪರೀಕ್ಷೆಯನ್ನು ತೆಗೆದುಕೊಂಡರು,ಧನಾತ್ಮಕವಾಗಿ ಚಿಕಿತ್ಸೆಗೆ ಪಡೆದಿದ್ದೇನೆ ಎಂದರು.
ಜೇರ್ ಅವರಿಗೆ ಶ್ವಾಸಕೋಶದ ಸ್ಕ್ಯಾನ್ ಕೂಡ ಮಾಡಲಾಗಿದೆ. ಶ್ವಾಸಕೋಶದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂಬುದು ಗೊತ್ತಾಗಿದೆ.
ಜೇರ್ ಹಿಂದೆ ಕೊವಿಡ್-19 ಮುನ್ನೆಚ್ಚರಿಕಾ ಕ್ರಮಗಳನ್ನು ಗಾಳಿಗೆ ತುರುವ ಹಾಗೇ ಹಾಗೂ ಮಾಸ್ಕ್ ಧರಿಸದೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದರು, ಯಾರಿಗೆಂದರೆ ಅವರಿಗೆ ಶೇಕ್ ಹ್ಯಾಂಡ್ ಮಾಡುತ್ತಿದ್ದರು. ಆದರೆ ಇಗ ಅವರಿಗೆ ಕೊರೋನಾ ಸೋಂಕು ತಗುಲಿದೆ .
ಈವರೆಗೆ 65,000 ಕ್ಕೂ ಹೆಚ್ಚು ಬ್ರೆಜಿಲಿಯನ್ನರುಕೋವಿಡ್ -19 ನಿಂದ ಸಾವನ್ನಪ್ಪಿದ್ದಾರೆ ಮತ್ತು 1,500,000 ಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದಾರೆ.ವಿಶ್ವದ ಎರಡನೇ ಅತಿ ಹೆಚ್ಚು ಕೊರೋನಾ ಸೋಂಕಿತರು, ಮತ್ತು ವ್ಯಾಪಕವಾದ ಪರೀಕ್ಷೆಯ ಕೊರತೆಗ ಹೆಚ್ಚಾಗಿದೆ.