ಬೆಂಗಳೂರು: ಕೊವಿಡ್ ಮತ್ತು ಪ್ರವಾಹ ವೀಕ್ಷಣೆ, ಪರಿಶೀಲನೆ ಮಾಡಲು ಕೂಡಲೇ ಜಿಲ್ಲೆಗಳಿಗೆ ತೆರಳಿ ಕೊವೀಡ್ ಮೂರನೇ ಅಲೆ ಪ್ರವಾಹದಿಂದ ಹಾನಿಯಾದ ಪ್ರದೇಶಗಳಿಗೆ ಪರಿಹಾರ ಹಾಗೂ ಹೆಚ್ಚಿನ ಪರಿಹಾರ ನೀಡಲು ಪ್ರಸ್ತಾವನೆ ಕಳುಹಿಸಲು ಸೂಚನೆ ನೀಡಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ನೂತನ ಸಚಿವರೊಂದಿಗೆ ಸಚಿವ ಸಂಪುಟದ ಸಭೆಯ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದರು.
ಕೊರೊನಾ ಮೂರನೇ ಅಲೆಯ ಬಗ್ಗೆ ಸಚಿವರುಗಳು ಪರಿಶೀಲನೆ ನಡೆಸಬೇಕು. ನೂತನ ಸಚಿವರಿಗೆ ನಾನೇ ಸ್ವತಃ ಖಾತೆ ಹಂಚಿಕೆ ಮಾಡುತ್ತೇನೆ. ಕೊವೀಡ್, ನೆರೆ ಪರಿಶೀಲನೆ ಮಾಡಲು ನಾಳೆಯೇ ನಿಮ್ಮ ಜಿಲ್ಲೆಗಳಿಗೆ ತೆರಳುವಂತೆ ಸೂಚನೆ ನೀಡಿದ್ದೇನೆ ಎಂದರು.