ಕ್ರೀಡೆಯಲ್ಲಿ ಸೋಲು, ಗೆಲವು ಮುಖ್ಯವಲ್ಲ: ಭಾಗವಹಿಸುವ ಮನೋಭಾವನೆ ಮುಖ್ಯ: ಸಿದ್ದನಗೌಡರ

  • 15 Jan 2024 , 2:48 AM
  • Belagavi
  • 129

ಹೊಸೂರ: ಕ್ರೀಡೆಯಲ್ಲಿ ಸೋಲು ಗೆಲವು ಮುಖ್ಯವಲ್ಲ ಕ್ರೀಡಾ ಸ್ಪೂರ್ತಿಯಿಂದ ಭಾಗವಹಿಸುವ ಮನೋಭಾವನೆ ಮುಖ್ಯ ಎಂದು ನಲ್ಲು ಎಫ್.ಎಸ್.ಸಿದ್ದನಗೌಡರ ಹೇಳಿದರು. ಗ್ರಾಮದ ಅರಳಿಕಟ್ಟಿ ಬಸವೇಶ್ವರ ಯುವಕ ಸಂಘದ ವತಿಯಿಂದ ಹಾಫ್ ಪಿಚ್ ಕ್ರೀಕೆಟ್ ಸ್ಪರ್ಧೆಯನ್ನು ಉದ್ಘಾಟನೆಗೊಳಿಸಿ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಯುವ ಪೀಳಿಗೆ ಮೊಬೈಲ್ ಪೋನವೆ ಸರ್ವಸ್ವವಾಗಿ ಮಾಡಿಕೊಂಡು ದೈಹಿಕ ಶ್ರಮವಿಲ್ಲದೆ ಅಶಕ್ತರಾಗುತ್ತಿರುವ ಸಂದರ್ಭದಲ್ಲಿ ಕ್ರೀಡೆಗಳನ್ನು ಹಮ್ಮಿಕೊಳ್ಳುವ ಮೂಲಕ ಯುವಕರಲ್ಲಿ ಕ್ರೀಡಾ ಸ್ಪೂರ್ತಿ ತುಂಬುತ್ತಿರುವ ಕಾರ್ಯ ಶ್ಲಾಘನೀಯ ಎಂದರು.

ಗ್ರಾಪಂ ಸದಸ್ಯ ಎಸ್.ಕೆ.ಮೆಳ್ಳಿಕೇರಿ ಮಾತನಾಡಿ ಗ್ರಾಮೀಣ ಪ್ರತಿಭೆಗಳಿಗೆ ಇದೊಂದು ಒಳ್ಳೆಯ ಅವಕಾಶವಾಗಿದ್ದು ಇದರಿಂದ ಅವರ ಸಾಮರ್ಥ್ಯ ತೊರ್ಪಡಿಸಲು ವೇದಿಕೆಯಾಗಿದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದರು. ಗುತ್ತಿಗೆದಾರ ಶಂಕರ ತಲ್ಲೂರ, ಆಯೋಜಕರಾದ ಪ್ರಶಾಂತ ಮಾಕಿ , ಸಚಿನ ಜಕ್ಕಾನಟ್ಟಿ, ರಾಜು ಈಳಿಗೇರ, ರವಿ ಮಾಕಿ, ಬಸವರಾಜ ಹುಂಬಿ,ಮಂಜುನಾಥ ಹುರಳಿ ರುದ್ರೇಶ ಮದಲಭಾಂವಿ, ಬಸವರಾಜ ಹುರಳಿ, ಅಜ್ಜಪ್ಪ ಹುರಳಿ, ಪ್ರಜ್ವಲ ಮಾಕಿ, ಈರಣ್ಣ ಹುಂಬಿ, ಚಂದನ ಮತ್ತಿಕೊಪ್ಪ ಇತರರು ಇದ್ದರು.

Read All News