ಹುಕ್ಕೇರಿ: ತಾಲೂಕಿನ ಶಿರೂರ ಗ್ರಾಮದಲ್ಲಿ ನೂತನವಾಗಿ ಸ್ಥಾಪಿಸಿದ ರಾಹುಲ್ ಜಾರಕಿಹೊಳಿ ಅಭಿಮಾನಿ ಬಳಗವನ್ನು ಕಾಂಗ್ರೆಸ್ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಇಂದು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಸಂಘದ ಮೂಲಕ ಗ್ರಾಮ ಹಾಗೂ ಸುತ್ತಲಿನ ಗ್ರಾಮಗಳ ಜನರಿಗೆ ಅಗತ್ಯ ನೆರವು ಒದಗಿಸಿ. ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳಿ. ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕ್ರೀಡಾಕೂಟಗಳನ್ನು ಆಯೋಜಿಸಿ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಎಂದು ಸಲಹೆ ನೀಡಿದರು.
ಇದಕ್ಕೂ ಮೊದಲು ಗ್ರಾಮಸ್ಥರು ರಾಹುಲ್ ಅವರನ್ನು ಗ್ರಾಮಕ್ಕೆ ಅದ್ಧೂರಿಯಾಗಿ ಬರಮಾಡಿಕೊಂಡರು. ವಾಧ್ಯಮೇಳಗಳ ಮೂಲಕ ಸ್ವಾಗತ ಕೋರಿದರು. ಕಾರ್ಯಕ್ರಮದಲ್ಲಿ ರಾಹುಲ್ ಅವರನ್ನು ಅಭಿಮಾನಿ ಬಳಗದ ಸದಸ್ಯರು ಸನ್ಮಾನಿಸಿದರು.
ಮುಖಂಡರಾದ ಯಲ್ಲಪ್ಪ ನಾಯಿಕ, ನಾಗರಾಜ್ ನಾಯಿಕ್, ಕರೆಪ್ಪ ಈರಬಾವಿ, ಶಿವರಾಜ್ ಕಿರಬಿಡಿ, ಪರಶುರಾಮ್ ನಾಯಿಕ್ ಸೇರಿ ಅಭಿಮಾನಿ ಬಳಗದ ಸದಸ್ಯರು ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಶಿರೂರ್ ಡ್ಯಾಂ ವೀಕ್ಷಣೆ:
ಕಾರ್ಯಕ್ರಮದ ನಂತರ ರಾಹುಲ್ ಅವರು ಶಿರೂರ್ ಡ್ಯಾಂ ವೀಕ್ಷಣೆ ಮಾಡಿದರು. ಗುತ್ತಿಗೆದಾರರಾದ ಮಾರುತಿ ದಾದಿಕಾನ, ಈರಪ್ಪ ಬಂಜಿರಾಮ್, ಗಿರೀಶ ಪಾಟೀಲ ಸೇರಿ ಇನ್ನಿತರರು ಇದ್ದರು.