ಬೆಳಗಾವಿ:ಬೆಳಗ್ಗೆ ಇಂದ ಸತತವಾಗಿ ಸುರಿಯುತ್ತಿರುವ ವರುಣನ ಆರ್ಭಟಕ್ಕೆ ತಾಲೂಕಿನ ಜನತೆ ತತ್ತರ, ಸತತ ಮಳೆಗೆ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಮಳೆರಾಯ ರಾತ್ರಿ ಹಗಲು ಎನ್ನದೇ ಹುಕ್ಕೇರಿ ಹಾಗೂ ಚಿಕ್ಕೋಡಿ ತಾಲೂಕಿನ ವಿವಿಧೆಡೆ ಎರಡು ದಿನಗಳಿಂದ ಸುರಿಯುತಿದ್ದೆ, ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.
ಭಾರೀ ಮಳೆಗೆ ರಸ್ತೆಯ ಮೇಲೆ ನೀರು ಆವರಿಸಿಕೊಂಡಿದೆ. ಹುಕ್ಕೇರಿ ತಾಲೂಕಿನಲ್ಲಿ ಮಳೆ ನೀರು ರಭಸದಿಂದ ಹರಿಯುತ್ತಿದ್ದು. ಭಾರಿ ಪ್ರಮಾಣದ ನೀರಿಗೆ ರಸ್ತೆ ಚರಂಡಿ ತುಂಬಿದೆ ಇದರಿಂದ ಸಂಚಾರ ಅಸ್ತವ್ಯಸ್ತ ವಾಗಿದೆ.