ಕೊರೊನಾ ಎಫೆಕ್ಟ್ ; ದೇವಸ್ಥಾನ ಹುಂಡಿ ಖಾಲಿ ಖಾಲಿ!
- 18 Dec 2023 , 1:09 AM
- Belagavi
- 109
ಬೆಳಗಾವಿ : ಕೊರೊನಾ ಎಂಬ ಮಹಾ ಹೆಮ್ಮಾರಿಯಿಂದಾಗಿ ಜಿಲ್ಲೆಯ ದೇವಸ್ಥಾನಗಳಿಗೆ ಲಾಕ್ ಡೌನ್ ಎಫೆಕ್ಟ್ ತಟ್ಟಿದ್ದು ಇದರಿಂದ ದೇವಸ್ಥಾನಗಳ ಹುಂಡಿ ಭರ್ತಿಯಾಗದೆ ಕೋಟ್ಯಾಂತರ ರೂಪಾಯಿ ನಷ್ಟ ಉಂಟಾಗಿದೆ. ಬೆಳಗಾವಿ ಜಿಲ್ಲೆಯ ಪ್ರಸಿದ್ದವಾಗಿರುವ ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಹಾಗೂ ರಾಯಬಾಗದ ಚಿಂಚಲಿ ಮಾಯಕ್ಕ ದೇವಸ್ಥಾನದ ಆದಾಯಕ್ಕೂ ಬಾರಿ ಪೆಟ್ಟಾಗಿದ್ದು ಸುಮಾರು 6 ಕೋಟಿ ರೂಪಾಯಿ ನಷ್ಟವಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಭಕ್ತರನ್ನು ಹೊಂದಿರೋ ಯಲ್ಲಮ್ಮ, ಮಾಯಕ್ಕಾ ದೇವಸ್ಥಾನಕ್ಕೆ ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರದಿಂದ ಭಕ್ತರು ಆಗಮಿಸುತ್ತಿದ್ದರು. ಕಳೆದ ವರ್ಷ ಆದಾಯ ನೋಡಿದಾಗ ಪ್ರಸ್ತಕ ವರ್ಷ ನೋಡಿದಾಗ ಅಂದಾಜು ಮಾರ್ಚ್ ತಿಂಗಳಲ್ಲಿ 4.48 ಕೋಟಿ ರೂಪಾಯಿ, ಎಪ್ರಿಲ್ ತಿಂಗಳಲ್ಲಿ 78.68 ಲಕ್ಷ ರೂಪಾಯಿ, ಮೇ ತಿಂಗಳಲ್ಲಿ 71 ಲಕ್ಷ ರೂಪಾಯಿಗಳಷ್ಟು ನಷ್ಟವಾಗಿದೆ. ಕಳೆದ ವರ್ಷ ಮಾರ್ಚ, ಏಪ್ರಿಲ್, ಮೇ ತಿಂಗಳು ಸೇರಿ ಅಂದಾಜು 5 ಕೋಟಿ 98 ಲಕ್ಷದಷ್ಟು ಆದಾಯ ಸಂಗ್ರಹವಾಗಿತ್ತು ಆದರೆ ಈ ವರ್ಷ ಲಾಕಡೌನದಿಂದ ದೇವಾಲಯಗಳಿಗೆ ಬೀಗ್ ಹಾಕಲಾಗಿದೆ. ದೇವಸ್ಥಾನದಲ್ಲಿ ಅರ್ಚಕರು, ಸಹಾಯಕರು ಸೇರಿ 150 ಜನ ಕೆಲಸ ಮಾಡುತ್ತಿದ್ದಾರೆ. ಅವರ ವೇತನದಲ್ಲಿ ಯಾವುದೇ ವ್ಯತ್ಯಾಸ ಇಲ್ಲ ಎಂದು ರವಿ ಕೋಟಾರಗಸ್ತಿ ತಿಳಿಸಿದ್ದಾರೆ.