ಬೆಳಗಾವಿ : ಗಡಿ ಜಿಲ್ಲೆ ಬೆಳಗಾವಿಯಲ್ಲಿ ಇಂದಿನಿಂದ ವೀಕೆಂಡ್ ಲಾಕ್ ಡೌನ್ ಹಿನ್ನಲೆ ಎರಡು ಗಂಟೆಯ ನಂತರ ಎಲ್ಲ ಅಂಗಡಿ ಮುಗ್ಗಟ್ಟು ಬಂದ್ ಮಾಡಿಸಿದ ಪೋಲಿಸರು.
ಶನಿವಾರ ಮಧ್ಯಾನ್ಹ 2 ಗಂಟೆಯವರೆಗೆ ತರಕಾರಿ, ಹೂವು ಹಣ್ಣು ಅಗತ್ಯ ವಸ್ತುಗಳ ತೆಗೆದುಕೊಳ್ಳಲು ಅವಕಾಶ ನೀಡಲಾಗಿತ್ತು.
ತುರ್ತು ಸೇವೆಗಳಿಗೆ ಯಾವುದೇ ನಿರ್ಬಂಧ ಇಲ್ಲ.ವೈದ್ಯಕೀಯ ತುರ್ತು ಸೇವೆ ಹೊರತುಪಡಿಸಿ ಸಂಪೂರ್ಣ ಎಲ್ಲಾ ಬಂದ್ ಮಾಡಲಾಗಿದೆ.
ಮಾರುಕಟ್ಟೆ ಹೋಗುವ ದಾರಿಯಲ್ಲಿ ಬ್ಯಾರಿಕೇಡ ಹಾಕಿ ಬಂದ್ ಮಾಡಿದ ಪೊಲೀಸರು. ವೀಕೆಂಡ್ ಲಾಕ್ ಡೌನ್ ಹಿನ್ನೆಲೆ ವಾಹನ ಸಂಚಾರ ವಿರಳ ವೀಕೆಂಡ್ ಲಾಕ್ ಡೌನ್ ಹಿನ್ನಲೆ ಪೊಲೀಸರು ಹೈ ಅಲರ್ಟ್ ಹೊರಡಿಸಿದ್ದಾರೆ.