ಸಾರ್ವಜನಿಕ ಸೂಚನೆ ಮೇರೆಗೆ ಗೋಕಾಕನಲ್ಲಿ "ಅಡಿಷನಲ್" ಲಾಕಡೌನ್

  • 14 Jan 2024 , 10:10 PM
  • Belagavi
  • 104

ಬೆಳಗಾವಿ: ಗೊಕಾಕ ತಾಲೂಕಿನಲ್ಲಿ ಕೊರೋನಾ ಪಾಸಿಟಿವ್ ಹೆಚ್ಚುತ್ತಿರುವ ಹಿನ್ನೆಲೆ ಸೀಲ್ ಡೌನ್ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ತಾಲೂಕಾಡಳಿತ ಸೂಚನೆ ನೀಡಿದೆ. ತಾಲೂಕಿನಲ್ಲಿ ಜಿಲ್ಲೆಯ ಗೋಕಾಕ ಪಟ್ಟಣದ ತಹಶೀಲ್ದಾರ್ ಕಚೇರಿ ಸೀಲ್ ಡೌನ್ ಮಾಡಲಾಗಿದೆ ಗೋಕಾಕ ಕಚೇರಿ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಹಿನ್ನೆಲೆಯಲ್ಲಿ 48 ಗಂಟೆಗಳ ಕಾಲ ಸೀಲ್ ಡೌನ್ ಮಾಡಿದ್ದು ಕಚೇರಿ ಸೀಲ್ ಡೌನ್ ಬಗ್ಗೆ ಮಾಹಿತಿ ನೀಡಿದ ಗೋಕಾಕ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ.  

ಕೊರೊನಾ ವೈರಸ್‌ ನಿಂದ ಪಟ್ಟಣದ ಜನರಿಗೆ ಆಂತಕ ಎದುರಾಗಿದೆ  ಇಂದಿನಿಂದ ಪಟ್ಟಣದಲ್ಲಿ ವ್ಯಾಪಾರ ವಹಿವಾಟುಗಳು ಬೆಳ್ಳಿಗೆ 6:00 ಗಂಟೆಯಿಂದ ಮಧ್ಯಾಹ್ನ 1:00 ಗಂಟೆಯ ವರಗೆ ಮಾತ್ರ ಸಾರ್ವಜನಿಕ ಸೂಚನೆ ಮೇರೆಗೆ ಗೋಕಾಕನಲ್ಲಿ "ಅಡಿಷನಲ್" ಲಾಕ್ ಡೌನ್ ಮಾಡಲಾಗಿದೆ.ಇನ್ನು ಮುಂದೆ ಬೆಳ್ಳಿಗೆ, ಸಂಜೆ ವಾಕಿಂಗ್, ಸ್ಪೋರ್ಟ್ಸ್ ಆಕ್ಟಿವಿಟಿ ಮಾಡದಂತೆ ಸೂಚಿಸಲಾಗಿದೆ.

ಪಾಸಿಟಿವ್ ಹೆಚ್ಚುತ್ತಿರುವ ಹಿನ್ನೆಲೆ ಸೀಲ್ ಡೌನ್ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ತಹಶೀಲ್ದಾರ್ ಸೂಚನೆ ನೀಡಿದ್ದಾರೆ. ಜಿಲ್ಲೆಯಲ್ಲಿ ನಿನ್ನೆ ಬುಧವಾರ ಒಂದೇ ದಿನಕ್ಕೆ 27 ಕೊರೋನಾ ಪಾಸಿಟಿವ್ ಪ್ರಕರಣ ಬಂದಿದ್ದು ಕೊರೋನಾ ವೈರಸ್ ಹರಡುವುದನ್ನು ಕಡಿಮೆ ಮಾಡಲು ಗೋಕಾಕ್ ತಾಲೂಕಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಒಂದು ವೇಳೆ ಸೀಲ್ ಡೌನ್ ಪ್ರದೇಶದಲ್ಲಿ ಅಧಿಕಾರಿಗಳು ಏನಾದರೂ ನಿಲರ್ಕ್ಷ್ಯ ತೋರಿದರೆ ಅವರನ್ನು ಅಮಾನತು ಮಾಡಲಾಗುವುದು ಎಂದು ಗೋಕಾಕ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಖಡಕ್ಕಾಗಿ ಸೂಚನೆ ನೀಡಿದ್ದಾರೆ.

Read All News